ಪ್ರಬುದ್ದ ಪಾತ್ರಗಳಲ್ಲಿ ಮುಗುಳುನಗೆ ಚೆಲುವೆ ಆಶಿಕಾ ರಂಗನಾಥ

ಕ್ರೇಜಿಬಾಯ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಆಶಿಕಾಗೆ ಹೆಸರು ತಂದುಕೊಟ್ಟಿದ್ದು ಮುಗುಳುನಗೆಯ ಭಗ್ನ ಪ್ರೇಮಿಯ ಪಾತ್ರ. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಮಾಸ್ ಲೀಡರ್, ಗರುಡ, Rambo 2 , ಗರುಡ, ತಾಯಿಗೆ ತಕ್ಕ ಮಗ, ರಾಜು ಕನ್ನಡ ಮಿಡಿಯಮ್, ಹೀಗೆ ಅವಕಾಶಗಳು ಸಿಗುತ್ತಾ ಹೋದಂತೆ, ಭಿನ್ನ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು. ಹಾಗೂ ಈ ವರೆಗೆ ಎಲ್ಲ ಚಿತ್ರಗಳಲ್ಲೂ ಸೌಮ್ಯ ಹುಡುಗಿಯ ಪಾತ್ರವನ್ನೇ ಮಾಡಿದರು. ಈಗ ರಗಡ್ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕೆಂಬ ಬಯಕೆ ಉಂಟಾಗಿದೆ ಆಶಿಕಾಗೆ. ಆದರೆ ಈ ವರೆಗೂ ರಗಡ್ ಪಾತ್ರಗಳು ಬಯಸಿ ಬಂದಿಲ್ಲವಂತೆ, ಹೀಗಾಗಿ ಪಾತ್ರಗಳ ಆಯ್ಕೆಯಲ್ಲಿ ಚೂಸಿಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ರಗಡ್ ಪಾತ್ರಗಳು ಸಿಕ್ಕರೆ ಅಭಿನಯಿಸುತ್ತಾರಂತೆ ಆಶಿಕಾ. “ಮುಗುಳುನಗೆ ಚಿತ್ರದಲ್ಲಿ ನಟಿಸಿದ ಬಳಿಕ ಯಾವ ಪಾತ್ರ ಕೊಟ್ಟರೂ ಆಯಕ್ಟ್ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದೆ” ಎನ್ನುವ ಆಶಿಕಾ, ಇದೇ ತಿಂಗಳ 19 ರಂದು, ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ರಾಜು ಕನ್ನಡ ಮಿಡಿಯಂ ಚಿತ್ರ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ..

Facebook Auto Publish Powered By : XYZScripts.com