ಪ್ರಥಮ್ ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಪವರ್ ಸ್ಟಾರ್ ಪುನೀತ್!

ಸಿನಿಮಾಡೆಸ್ಕ್ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ ಫ್ಯಾಮೀಲಿ ಪವರ್ ಶೋ ಕಾರ್ಯಕ್ರಮದಲ್ಲಿ ಈ ಬಾರಿಯ ಸೆಲಿಬ್ರಿಟೀಸ್ ಎಪಿಸೋಡ್ ನಲ್ಲಿ ಪ್ರಥಮ್ ಹಾಗೂ ಮನೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಥಮ್ ಅವರು ಪುನೀತ್ ಅವರು ಧರಿಸಿದ್ದ ಬ್ಲೇಜರ್ ಅನ್ನು ಪಡೆದಿದ್ದಾರೆ. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕೊಟ್ಟ ನೋಟ್ ನ್ನು ಇನ್ನೂ ಹಾಗೆ ಜೋಪಾನ ಮಾಡಿದ್ದೇನೆ. ನೀವು ಕೊಡುವ ಬ್ಲೇಜರ್ ಅನ್ನು ಮದುವೆಗೆ ಧರಿಸುತ್ತೇನೆ ಎಂದು ಪ್ರಥಮ್ ಹೇಳಿದ್ದಾರೆ.

ಆಟ ಮುಗಿದ ನಂತರ ಪ್ರಥಮ್ ಬಾಸ್ ಪ್ಲೀಸ್ ನಿಮ್ಮ ಬ್ಲೇಜರ್ ಕೊಡಿ ಎಂದು ಪ್ರಥಮ್ ಹೇಳುತ್ತಿದ್ದಂತಯೇ ಪುನೀತ್ ಅವರು ಧರಿಸಿದ್ದ ಬ್ಲೇಜರ್ ತೆಗೆದು ಪ್ರಥಮ್ ಗೆ ಕೊಟ್ಟರು.

Facebook Auto Publish Powered By : XYZScripts.com