ಪ್ಯಾಡ್ ಮ್ಯಾನ್ ಬಿಡುಗಡೆಯಾಗ್ತಿದ್ದಂತೆ ಅಕ್ಷಯ್ ಕುಮಾರ್ ಮೇಲೆ ಎಫ್ ಐ ಆರ್

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದ್ರೆ ಚಿತ್ರ ಕಾನೂನು ವಿವಾದದಲ್ಲಿ ಸಿಲುಕಿಕೊಂಡಿದೆ. ಬರಹಗಾರರೊಬ್ಬರು ಪ್ಯಾಡ್ ಮ್ಯಾನ್ ನಿರ್ಮಾಪಕರು ತಮ್ಮ ಸ್ಕ್ರಿಪ್ಟ್ ನ ದೃಶ್ಯವನ್ನು ಕದ್ದಿದ್ದಾರೆಂದು ಆರೋಪ ಮಾಡಿದ್ದಾರೆ. ಬರಹಗಾರ ರಿಪು ದಮನ್ ಜೈಸ್ವಾಲ್ ಅಕ್ಷಯ್ ಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

ಬರಹಗಾರ ತಮ್ಮ ಸ್ಕ್ರಿಪ್ಟನ್ನು ಧರ್ಮ ಪ್ರೊಡೆಕ್ಷನ್ ಗೆ ನೀಡಿದ್ದರಂತೆ. ಆ ಸ್ಕ್ರಿಪ್ಟ್ ನ ದೃಶ್ಯವನ್ನು ಕದ್ದು ಈ ಪ್ಯಾಡ್ ಮ್ಯಾನ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ರಿಪು ಆರೋಪ ಮಾಡಿದ್ದಾರೆ. ರಿಪು ಕೆಲ ತಿಂಗಳುಗಳ ಹಿಂದೆಯೇ ಫೇಸ್ಬುಕ್ ನಲ್ಲಿ ತಮ್ಮ ಸ್ಕ್ರಿಪ್ಟ್ ಬಗ್ಗೆ ಬರೆದುಕೊಂಡಿದ್ದರು. ಅರುಣಾಚಲ ಪ್ರದೇಶ ಮುರುಗನಾಥಂ ಬಗ್ಗೆಯೂ ಅವರು ಬರೆದಿದ್ದರು.

ಇದಾದ ಕೆಲವೇ ದಿನಗಳಲ್ಲಿ ಟ್ವಿಂಕಲ್ ಖನ್ನಾ ಮುರುಗನಾಥಂ ಜೀವನ ಚರಿತ್ರೆ ಆಧಾರಿತ ಚಿತ್ರ ಬರ್ತಿದೆ ಎಂದು ತಮ್ಮ ಫೇಸ್ಬುಕ್ ನಲ್ಲಿ ಬರೆದಿದ್ದರಂತೆ. ಪ್ಯಾಡ್ ಮ್ಯಾನ್ ಅನೇಕ ದೃಶ್ಯಗಳು ರಿಪು ಸ್ಕ್ರಿಪ್ಟ್ ನಿಂದ ಕದಿಯಲಾಗಿದೆಯಂತೆ.

Facebook Auto Publish Powered By : XYZScripts.com