ಪ್ಯಾಡ್ ಮ್ಯಾನ್ ಚಿತ್ರ ಕನ್ನಡಕ್ಕೆ ಬರಲಿದೆಯೆ?

ಅಕ್ಷಯ್ ಕುಮಾರ್ ನಟನೆಯ ಪ್ಯಾಡ್ ಮ್ಯಾನ್ ಚಿತ್ರ ಈಗ ಎಲ್ಲಡೆ ಸದ್ದು ಮಾಡುತ್ತಿದ್ದು, ಚಿತ್ರವನ್ನು ತಮಿಳು, ತೆಲುಗು, ಮಲೆಯಳ ಮತ್ತು ಕನ್ನಡದಲ್ಲಿ ರಿಮೇಕ್ ಮಾಡುವ ಇಂಗಿತವನ್ನು ತಮಿಳುನಾಡಿನ ಅರುಣಾಚಲಂ ಮುರುಘನಾಥಂ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಶುಚಿತ್ವ ಅಗತ್ಯ ಎಂದು ಮನಗಂಡ ತಮಿಳುನಾಡಿನ ಅರುಣಾಚಲಂ ಮುರುಘನಾಥಂ ಕಡಿಮೆ ವೆಚ್ಚದಲ್ಲಿ ಪ್ಯಾಡ್ ಗಳನ್ನು ತಯಾರಿಸುವುದನ್ನು ಕಂಡು ಹಿಡಿದರು.

ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಚಿತ್ರವನ್ನು ರಿಮೇಕ್ ಮಾಡಬೇಕು ಎಂದಿದ್ದಾರೆ. ತಮಿಳಿನಲ್ಲಿ ಧನುಷ್ ನಟಿಸಿದರೆ ಚೆನ್ನಾಗಿರುತ್ತದೆ ಮುರುಘನಾಥಂ ಹೇಳಿದ್ದಾರೆ. ಇನ್ನು ಕನ್ನಡದಲ್ಲಿ ಯಾರು ನಟಿಸಿಬಹುದು ಎಂಬ ಕುತೂಹಲವಿದ್ದು, ಇದಕ್ಕೆ ಉತ್ತರ ಸಿಗಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ.

Facebook Auto Publish Powered By : XYZScripts.com