‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಅಶ್ಲೀಲ ಆಡಿಷನ್: ರೊಚ್ಚಿಗೆದ್ದ ಯುವತಿಯರು!

ಸ್ಟಾರ್ ಸುವರ್ಣ ವಾಹಿನಿಯ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಕಾರ್ಯಕ್ರಮದ ನಾಲ್ಕನೇ ಆವೃತ್ತಿಗಾಗಿ ಇವತ್ತು ಮಲ್ಲೇಶ್ವರಂನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯ(ಸ್ವಾಯತ್ತ)ಕಾಲೇಜಿನಲ್ಲಿ ಆಡಿಷನ್ ನಡೆಸಲಾಗುತ್ತಿತ್ತು. ಇದೀಗ ಇದು ವಿವಾದದ ಕೇಂದ್ರ ಬಿಂದುವಾಗಿದೆ. ”ನಾವು ಯಾವ ತರಹದ ಡ್ರೆಸ್ ಹಾಕೊಂಡ್ ಬಂದಿದ್ದೇವೆ,ಯಾವ ತರಹ ಕಾಣ್ತೇವೆ ಅಂತೆಲ್ಲ ಆಯೋಜಕರು ಟಾಪ್ ಟು ಬಾಟಂ ನೋಡ್ತಾರೆ.

ನೋಡೋಕೆ ಚೆನ್ನಾಗಿ ಕಾಣಲಿಲ್ಲ ಅಂದ್ರೆ ಡೈರೆಕ್ಟ್ ರಿಜೆಕ್ಟ್ ಮಾಡ್ತಾರೆ. ನನಗೆ 3ಕಿಸ್ ಕೊಡು ನಿನ್ನ ಡೈರೆಕ್ಟ್ ಆಗಿ ಸೆಲೆಕ್ಟ್ ಮಾಡ್ತೀವಿ ಅಂತೆಲ್ಲ ಹೇಳ್ತಾರೆ. ಇದು ಆಡಿಷನ್ ನಾ?” ಅಂತ ನೊಂದ ಯುವತಿ ಹೇಳಿಕೊಂಡಿದ್ದಾಳೆ.

Facebook Auto Publish Powered By : XYZScripts.com