ಪೋಲಿ ಆಟ ಶುರುವಿಟ್ಟನೇ ‘ಪಾದರಸ’ ನಿರ್ದೇಶಕ?

ಈ ಹುಡುಗಿಯರಿಬ್ಬರು ಟೀವಿ ಒಂಭತ್ತರ ವರದಿಗಾರನನ್ನು ಜೊತೆಗೆ ಕರೆದೊಯ್ದು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆತನ ಮುಖವಾಡ ಬಯಲು ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ, ವಿಚಾರ ಹೇಗೆ ಪಸರ್ ಆಯಿತೋ ಗೊತ್ತಿಲ್ಲ; ಹೃಷಿಕೇಶ “ನಾನು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೂತಿದ್ದೀನಿ. ನೀವು ನನಗೆ ಬ್ಲಾಕ್ಮೇಲ್ ಮಾಡುತ್ತಿರೋದಾಗಿ ಕಂಪ್ಲೇಂಟ್ ಕೊಡ್ತೀನಿ” ಎನ್ನುತ್ತಿದ್ದಾನಂತೆ.

ಅದೇನು ದರಿದ್ರವೋ ಗೊತ್ತಿಲ್ಲ. ಹೆಸರಿಗೆ ಡೈರೆಕ್ಟರ್ರು ಅನಿಸಿಕೊಂಡು ಸೀರೆಶೋಕಿಯನ್ನೇ ಕಸುಬಾಗಿಸಿಕೊಂಡವರು ಸಿನಿಮಾರಂಗದಲ್ಲಿ ಕಸದಂತೆ ತುಂಬಿಹೋಗಿದ್ದಾರೆ. ಹಾಗೆ ದೂರದ ಮುಧೋಳದಿಂದ ಗಾಂಧಿ ನಗರಕ್ಕೆ ಎಂಟ್ರಿ ಕೊಟ್ಟು ಬೆದೆಗೆ ಬಂದ ಪ್ರಾಣಿಯಂತೆ ಮುಲುಕುತ್ತಿರೋ ಈ ವ್ಯಕ್ತಿಯ ಹೆಸರು ಹೃಷಿಕೇಶ ಜಂಬಗಿ!
ಸಂಚಾರಿ ವಿಜಯ್ ನಟಿಸುತ್ತಿರುವ ಪಾದರಸ ಅನ್ನೋ ಸಿನಿಮಾವನ್ನು ಈತ ನಿರ್ದೇಶಿಸುತ್ತಿದ್ದಾನೆ. ನಿರ್ದೇಶಕನಾಗಿ ಮೊದಲ ಬಾರಿಗೆ ‘ಪಾದ’ವಿಕ್ಕಿರುವ ಈತನ ‘ರಸ’ರಭಸ ಜೋರಾಗೇ ಇದ್ದಂತೆ ಕಾಣುತ್ತಿದೆ. ಅದ್ಯಾರೋ ಸಂಜನಾ ನಾಯ್ಡು ಅನ್ನೋ ಹುಡುಗಿಯನ್ನು ಹೀರೋಯಿನ್ನಾಗಿ ಆಯ್ಕೆ ಮಾಡಿಕೊಂಡು, ಆಕೆಯಿಂದ ಅಷ್ಟಿಷ್ಟು ಕಾಸನ್ನೂ ಗೆಬರಿಕೊಂಡು ‘ನಿನಗೆ ಆಕ್ಟಿಂಗ್ ಮಾಡಕ್ಕೇ ಬರಲ್ಲ’ ಅಂತಾ ಹೇಳಿ ಹೊರಹಾಕಿದ್ದಾನಂತೆ. ಹಾಳಾಗಿಹೋಗಲಿ ಅಂದರೆ, ರಾತ್ರಿಯಾಗುತ್ತಿದ್ದಂತೇ ಸಹನಟಿಯರಿಗೆ ಕರೆ ಮಾಡಿ, ‘ನಾನು ರೂಮಲ್ಲಿ ಒಬ್ನೇ ಇದೀನಿ ಬಾ’ ಅಂತಾ ಪೀಡಿಸ್ತಾನಂತೆ. ‘ಇಷ್ಟೊತ್ತಲ್ಲಿ ಕಾಲ್ ಮಾಡಿದರೆ ಮನೆಯವರು ಏನಂದುಕೊಳ್ಳುತ್ತಾರೆ’ ಅಂತಾ ಸಹನಟಿಯರು ಪ್ರಶ್ನಿಸಿದರೆ, ‘ಬರಲಿಲ್ಲ ಅಂದ್ರೆ ಕ್ಯಾರೆಕ್ಟರ್ ಕಟ್ ಮಾಡ್ತೀನಿ’ ಅಂತಾನಂತೆ.
ಸುಜಯಾ ಮತ್ತು ಅಮಿತಾ (ಹೆಸರು ಬದಲಿಸಿದೆ) ಎನ್ನುವ ಇಬ್ಬರು ಸಹನಟಿಯರು ಈಗ ಹೃಷಿಕೇಶ ಜಂಬಗಿಯನ್ನು ಝಾಡಿಸಲು ನಿಂತಿದ್ದಾರೆ. “ನಮಗೆ ಈತ ಕೊಡಬಾರದ ಕಷ್ಟ ಕೊಟ್ಟಿದ್ದಾನೆ. ಬೇಕು ಬೇಕೆಂದಾಗೆಲ್ಲಾ ಬಳಸಿಕೊಂಡಿದ್ದಾನೆ. ದಿನಕ್ಕೆ ಎರಡೂವರೆ ಸಾವಿರ ರುಪಾಯಿಗಳ ಪೇಮೆಂಟ್ ಕೊಡ್ತೀನಿ ಎಂದು ಹೇಳಿ ಹನ್ನೆರಡು ದಿನ ಶೂಟಿಂಗ್ ಮಾಡಿಸಿ ‘ಮತ್ತೆ ಮತ್ತೆ ಕರೆದಾಗೆಲ್ಲಾ ಹೋಗಲು’ ನಿರಾಕರಿಸಿದ್ದಕ್ಕೆ ಕನ್ವೇಯೆನ್ಸ್ ಮಾತ್ರ ಕೊಟ್ಟು ಕೈ ಎತ್ತಿದ್ದಾನೆ. ಇಂಥವನಿಂದ ಬೇರೆ ಯಾವ ನಟಿಯರಿಗೂ ಇಂಥ ಪರಿಸ್ಥಿತಿ ಬರಬಾರದು” ಎಂದು ಸೆಟೆದು ನಿಂತಿದ್ದಾರೆ. “ಹೌದೇನಯ್ಯಾ ಹೃಷಿಕೇಷ ಈ ಹೆಣ್ಮಕ್ಳು ಆರೋಪಿಸ್ತಾ ಇರೋದು ನಿಜಾನಾ” ಅಂತಾ ಕೇಳಿದರೆ “ನಾನು ಸಿನಿಮಾದಲ್ಲಿ ಛಾನ್ಸು ಕೊಟ್ಟಿಲ್ಲ ಅಂತಾ ಕೆಲವರು ಹೀಗೆ ಆರೋಪ ಮಾಡ್ತಾರೆ. ನಟನೆ ಬರೋದಿಲ್ಲ ಅಂತಾ ತುಂಬಾ ಜನರನ್ನ ರಿಜೆಕ್ಟ್ ಮಾಡಿದ್ದೀನಿ. ಹೀಗಿರೋವಾಗ ಇದೆಲ್ಲಾ ಮಾಮೂಲು” ಅಂತಾ ಐವತ್ಮೂರು ಸಿನಿಮಾಗಳನ್ನು ನಿರ್ದೇಶಿಸಿರೋ ಸೀನಿಯರ್ ಡೈರೆಕ್ಟರ್ ಥರಾ ಮಾತಾಡ್ತಾನೆ ಹೃಷಿಕೇಶ.

ಇಷ್ಟಕ್ಕೂ ಈಗ ಹೃಷಿಕೇಶನ ಮೇಲೆ ಆರೋಪ ಮಾಡುತ್ತಿರುವ ಸಹನಟಿಯರು ಅದಾಗಲೇ ಏಳೆಂಟು ವರ್ಷಗಳಿಂತ ಚಿತ್ರರಂಗದಲ್ಲಿರುವವರು ಮತ್ತು ಇವನಪ್ಪನಂಥ ಪೊರ್ಕಿಗಳನ್ನು ಕಂಡಿರುವವರು. ಯಾರ‍್ಯಾರಿಗೆ ಏನೇನು ನೀಡಬೇಕೋ ಅದನ್ನೆಲ್ಲಾ ಸಂದಾಯ ಮಾಡಿ, ತಮ್ಮ ಪಾಡಿಗೆ ನಟನೆ ಮಾಡಿಕೊಂಡು ಪೇಮೆಂಟ್ ಪಡೆಯುತ್ತಿರುವವರು. ಏನೇ ಸಂಕಟಗಳಿದ್ದರೂ ಅದು ತಮ್ಮ ವೃತ್ತಿಯ ಭಾಗವಷ್ಟೇ ಎಂದುಕೊಂಡು ಬದುಕು ನೂಕುತ್ತಿರುವ ಈ ಹುಡುಗಿಯರು ಹೃಷಿಕೇಶನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂದರೆ ಅವರು ಹೇಳುತ್ತಿರೋದಿಷ್ಟೇ.. ‘ತನಗೆ ಬೇಕಿರೋದನ್ನು ಪಡೆದು, ನಮ್ಮ ಅನ್ನಕ್ಕೆ ಮಣ್ಣಾಕಿದ್ದಾನೆ’ ಅಂತಾ.
ಸದ್ಯ ಈ ಹುಡುಗಿಯರಿಬ್ಬರು ಟೀವಿ ಒಂಭತ್ತರ ವರದಿಗಾರನನ್ನು ಜೊತೆಗೆ ಕರೆದೊಯ್ದು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆತನ ಮುಖವಾಡ ಬಯಲು ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ, ವಿಚಾರ ಹೇಗೆ ಪಸರ್ ಆಯಿತೋ ಗೊತ್ತಿಲ್ಲ; ಹೃಷಿಕೇಶ “ನಾನು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೂತಿದ್ದೀನಿ. ನೀವು ನನಗೆ ಬ್ಲಾಕ್ಮೇಲ್ ಮಾಡುತ್ತಿರೋದಾಗಿ ಕಂಪ್ಲೇಂಟ್ ಕೊಡ್ತೀನಿ” ಎನ್ನುತ್ತಿದ್ದಾನಂತೆ. ಇದು ಸಿನಿಬಜ಼್ಗೆ ದೊರೆತಿರುವ ಈತನಕದ ಮಾಹಿತಿ. ಇನ್ನು ಹೃಷಿಕೇಶನ ರಾಸಲೀಲೆ ಏನೆಲ್ಲಾ ಬೆಳವಣಿಗೆ ಪಡೆಯುತ್ತದೋ ಗೊತ್ತಿಲ್ಲ!

 

Courtesy: Cinebuzz

Facebook Auto Publish Powered By : XYZScripts.com