ಪೊಗರು ಚಿತ್ರಕ್ಕಾಗಿ ದ್ರುವ ಸರ್ಜಾ ಬದಲಾದ ರೀತಿ ನೋಡಿದ್ದೀರಾ?.. ಇಲ್ಲಿ ನೋಡಿ

ನಟ ಧ್ರುವ ಸರ್ಜಾ ನಾಳೆ (ಅಕ್ಟೋಬರ್ 6) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಈ ವರ್ಷದ ಬರ್ತ್ ಡೇ ವಿಶೇಷವಾಗಿ ‘ಪೊಗರು’ ಸಿನಿಮಾದ ಪೋಸ್ಟರ್ ಗಳು ಬಿಡುಗಡೆಯಾಗಿವೆ.

‘ಪೊಗರು’ ಸಿನಿಮಾದ ಪೋಸ್ಟರ್ ನೋಡಿದ ಕೂಡಲೇ ಎಲ್ಲರೂ ಒಂದು ಕ್ಷಣ ಬೆರಗಾಗುತ್ತಾರೆ. ಹೌದು, ಅದಕ್ಕೆ ಕಾರಣ ಧ್ರುವ ಸರ್ಜಾ ಲುಕ್. ಈ ಹಿಂದಿನ ಮೂರು ಸಿನಿಮಾದಲ್ಲಿ ಒಂದೇ ರೀತಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಧ್ರುವ ಇಲ್ಲಿ ಪೂರ ಬದಲಾಗಿದ್ದಾರೆ.

ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟಿರುವ ಧ್ರುವಸರ್ಜಾ ಲುಕ್ ಖದರ್ ಆಗಿದೆ. ಧ್ರುವ ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಕುತೂಹಲ ಹುಟ್ಟಿದೆ.

Facebook Auto Publish Powered By : XYZScripts.com