ಪುನೀತ್ ಹುಟ್ಟು ಹಬ್ಬ’ರಾಜ್ಯರತ್ಸೋತ್ಸವ’ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಓದಿ

ನಟ ಪುನೀತ್ ಅವರ ಹುಟ್ಟು ಹಬ್ಬಕ್ಕೆ ಇನ್ನೂ ಮೂರು ವಾರಗಳು ಬಾಕಿ ಇವೆ. ಮಾರ್ಚ 17 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿರುವ ಪುನೀತ್ ಗೆ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಆಚರಿಸಲು ಅವರ ಅಭಿಮಾನಿಗಳು 15 ದಿನಗಳ ಮುಂಚಿತವಾಗಿಯೇ ಸಿದ್ದತೆ ಮಾಡಿಕೊಂಡಿದ್ದರು. ಅದೇ ರೀತಿ ಇದೀಗ ಪುನೀತ್ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು ತಯಾರಿ ನಡೆಯುತ್ತಿದೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಅಪ್ಪು ಸಹ ದೊಡ್ಡ ಉಡುಗೊರೆ ಕೊಡುವ ತಯಾರಿಯಲ್ಲಿದ್ದಾರೆ. ಹಾಗಿದ್ದರೆ ಹೇಗೆಲ್ಲಾ ತಯಾರಿ ನಡೆಯುತ್ತಿದೆ ಅಂತ ಕೇಳ್ತಿದ್ದೀರಾ.

ರಾಜ್ಯರತ್ಸೋತ್ಸವ ಎಂಬ ಹೆಸರಿನಡಿ ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದ ಸಿದ್ದತೆ ನಡೆದಿದ್ದು, 3 ವಾರಗಳ ಮುಂಚೆಯೇ ಕೆಲಸ ಪ್ರಾರಂಭಿಸಿದ್ದಾರೆ ಅಭಿಮಾನಿಗಳು.

ಇನ್ನು ಪುನೀತ್ ಸಹ ತಮ್ಮ ಚಿತ್ರದ ಕುರಿತು ಮಾರ್ಚ 17 ರಂದು ಮಾಹಿತಿ ನೀಡುವ ಮೂಲಕ ಗಿಪ್ಟ್ ಕೊಡಲಿದ್ದಾರೆ.

ಸದ್ಯ ಪುನೀತ್ ಕೈಯಲ್ಲಿ ಮೂರು ಚಿತ್ರಗಳಿದ್ದು, ಅವುಗಳಲ್ಲಿಯಾವುದು ಮೊದಲು ಶುರುವಾಗಲಿದೆ ಎಂಬ ಗೊಂದಲಕ್ಕೆ ಉಂಟಾಗಿತ್ತು. ಇದೀಗ ಬಂದ ಮಾಹಿತಿಯ ಪ್ರಕಾರ, ಪವನ್ ಒಡೆಯರ್ ನಿರ್ದೇಶನದ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾಗೆ ಮೊದಲು ಚಾಲನೆ ಸಿಗಲಿದೆ.

Facebook Auto Publish Powered By : XYZScripts.com