ಪುನೀತ್ ಹಾಡಿರುವ ಉತ್ತರ ಕರ್ನಾಟಕ ಶೈಲಿಯ ಹಾಡು ಹೇಗಿದೆ? ಇಲ್ಲಿ ಕೇಳಿ

‘ಲಾಸ್ಟ್ ಬಸ್’ ಚಿತ್ರದ ನಂತರ ನಿರ್ದೇಶಕ ಅರವಿಂದ್ ಈ ಬಾರಿ ‘ಮಟಾಶ್’ ಎನ್ನುತ್ತಿದ್ದಾರೆ. ಹೌದು, ‘ಮಟಾಶ್’ ಎಂಬುದು ಚಿತ್ರದ ಹೆಸರು. ‘ಮಾಡ್ತಾ ಇರ್ತೀವಿ ನೋಡ್ತಾ ಇರಿ’ ಎಂಬುದು ಚಿತ್ರದ ಅಡಿಬರಹವಾಗಿದ್ದು ಪೋಸ್ಟರ್ ಆಕರ್ಷಿತವಾಗಿದೆ.

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಉತ್ತರ ಕರ್ನಾಟಕ ಶೈಲಿಯ ಹಾಡನ್ನು ಹಾಡಿದ್ದಾರೆ. ‘ಉಡಾಳ್ರಪ್ಪೋ ಉಡಾಳ್ರು.. ಊರ್ ತುಂಬಾ ಉಡಾಳ್ರು.. ಚಜ್ಜೀ ರೊಟ್ಟಿ, ಚವಳಿಕಾಯಿದುಡ್ಡಿಗೆ ಏರ್ ಬದನೇಕಾಯಿ.’ ಎಂಬ ಸಾಲಿನ ಈ ಹಾಡನ್ನು ಸುನೀಲ್ ಕುಮಾರ್ ಸುಧಾಕರ್ ಬರೆದಿದ್ದು, ಎಸ್ ಡಿ ಅರವಿಂದ್ ಸಂಗೀತ ನೀಡಿದ್ದಾರೆ.

‘ಪುನೀತ್ ರಾಜ್ ಕುಮಾರ್ ಹಾಡಿರುವಈ ಚಿತ್ರದಲ್ಲಿ ಬೀಜಾಪುರ ಕಡೆಯ ಕನ್ನಡ ಭಾಷೆ ರೀತಿಯಲ್ಲಿ ಟಂಗ್ ಟ್ವಿಸ್ಟ್ ತರ ಇರುತ್ತದೆ.ಜನಪದ ಮತ್ತು ಮಾಡರ್ನ್ ಸ್ಟೈಲ್ ಎರಡೂ ಬ್ಲೆಂಡ್ ಆದ ಹಾಡು. ಅವರು ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ. ಬಹಳ ಎಂಜಾಯ್ ಮಾಡಿದರು’ ಎಂದು ನಿರ್ದೇಶಕರು ಹೇಳುತ್ತಾರೆ.

Facebook Auto Publish Powered By : XYZScripts.com