ಪುನೀತ್ ಅಭಿಮಾನಿಗಳು ‘ರಚಿತಾ ಬೇಡ’ ಅಭಿಯಾನ ಮಾಡುತ್ತಿರುವುದೇಕೇ?.. ಇಲ್ಲಿ ಓದಿ

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ ನಟಸಾರ್ವಭೌಮ’ ಸಿನಿಮಾದ ಮೂಲಕ ‘ರಣವಿಕ್ರಮ’ ಚಿತ್ರದ ನಂತರ ಒಂದಾಗುತ್ತಿದ್ದಾರೆ. ಇದೇ ವೇಳೆ ಅಪ್ಪು ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ತೆರೆಹಂಚಿಕೊಳ್ಳುತ್ತಿದ್ದಾರೆ.

ಆದರೆ ಈ ನಡುವೆ ಅಪ್ಪು ಅಭಿಮಾನಿಗಳಿಗೆ ‘ನಟಸಾರ್ವಭೌಮ’ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಬೇಸರವಿದೆ ಅದೇ ನಟಸಾರ್ವಭೌಮ ಸಿನಿಮಾಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಆಯ್ಕೆಯಾಗಿರುವುದು, ಹೌದು, ಅಪ್ಪು ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಕುರಿತು ಅಪ್ಪು ಅಬಿಮಾನಿಗಳು ಟ್ವಿಟರ್ನಲ್ಲಿ ‘ರಚಿತಾ ಬೇಡ’ ಎನ್ನುವ ಅಭಿಯಾನವನ್ನೂ ಶುರುಮಾಡಿದ್ದಾರೆ. ತಮ್ಮ ಟ್ವೀಟ್ಗಳ ಮೂಲಕ ರಚಿತಾ ಅವರನ್ನು ನಾಯಕಿ ಪಾತ್ರದಿಂದ ಕೈಬಿಡಬೇಕು ಎಂದು ನಿರ್ದೇಶಕರನ್ನು ಒತ್ತಾಯಿಸುತ್ತಿದ್ದಾರೆ.

ಇನ್ನು ಪುನೀತ್ ಅಭಿಮಾನಿಗಳು ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ, ಒಂದು ಸುದ್ದಿ ಮೂಲಗಳ ಪ್ರಕಾರ ‘ಚಕ್ರವ್ಯೂಹ’ ಚಿತ್ರದ ಪ್ರಮೋಶನ್ ವೇಳೆಯಲ್ಲಿ ರಚಿತಾರಾವ್ ಆಡಿದ್ದ ಮಾತುಗಳು ಈಗ ಪುನೀತ್ ಅಭಿಮಾನಿಗಳನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಆದರೆ ಅಭಿಮಾನಿಗಳ ಈ ನಡವಳಿಕೆ ಅಪ್ಪುವಿಗೂ ಕೂಡ ಬೇಸರವಾಗಿರುವುದರಲ್ಲಿ ಸಂಶಯವಿಲ್ಲ.

Facebook Auto Publish Powered By : XYZScripts.com