ಪವನ್ ಒಡೆಯರ್ ನಿರ್ದೇಶನದ ಪವರ್ ಸ್ಟಾರ್ ಚಿತ್ರಕ್ಕೆ ಇವರೇ ನಾಯಕಿ.. ಇಲ್ಲಿ ಓದಿ

ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಕೆಲ ದಿನಗಳ ಹಿಂದೆಯಷ್ಟೇ ಸೆಟ್ಟೇರಿತ್ತು. ಅದೇ ರೀತಿ ಇದೀಗ ಈ ಚಿತ್ರತಂಡದಿಂದ ಹೊಸ ಸುದ್ದಿ ಒಂದಿದೆ. ಪುನೀತ್ ಅವರ ಈ ಸಿನಿಮಾಗೆ ಈಗ ನಾಯಕಿಯ ಆಯ್ಕೆ ಆಗಿದೆ.

ಪುನೀತ್ ಜೊತೆಗೆ ಕಾಣಿಸಿಕೊಳ್ಳುತ್ತಿರುವ ಆ ಬೆಡಗಿ ಪ್ರಿಯಾಂಕ ಜ್ವಾಲಕರ್. ಪ್ರಿಯಾಂಕ ಜ್ವಾಲಕರ್ ಮೂಲತಃ ಮಹಾರಾಷ್ಟ್ರದ ಅನಂತಪುರದ ಹುಡುಗಿ, ಸಾಫ್ಟ್ ವೇರ್ ಎಂಜಿನೀಯರ್ ಆಗಿರುವ ಪ್ರಿಯಾಂಕ ತೆಲುಗಿನಲ್ಲಿ ಈಗಾಗಲೇ ಒಂದು ಸಿನಿಮಾ ಮಾಡಿದ್ದಾರೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ ದೇವರಕೊಂಡ ನಟನೆಯ ‘ಟ್ಯಾಕ್ಸಿವಾಲಾ’ ಸಿನಿಮಾದಲ್ಲಿ ಪ್ರಿಯಾಂಕಾ ಜ್ವಾಲಕರ್ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾದ ನಂತರ ಈಗ ಅಪ್ಪು ಜೊತೆ ನಟಿಸುವ ಅವಕಾಶವನ್ನು ಪ್ರಿಯಾಂಕ ಪಡೆದಿದ್ದಾರೆ.

ಪ್ರಿಯಾಂಕಾ ಜ್ವಾಲಕರ್ ಈ ಸಿನಿಮಾದ ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗುವ ಕಾರಣದಿಂದ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆಯಂತೆ. ಪ್ರಿಯಾಂಕ ಕೂಡ ಖುಷಿಯಿಂದ ತಮಗೆ ಬಂದ ಈ ಅವಕಾಶವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಂಕ ಜ್ವಾಲಕರ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

ಮಾರ್ಚ್ 8 ರಿಂದ ಸಿನಿಮಾದ ಶೂಟಿಂಗ್ ಶುರು ಆಗಲಿದೆ. ಚಿತ್ರಕ್ಕೆ ಡಿ ಇಮ್ಮನ್ ಮ್ಯೂಸಿಕ್ ಮಾಡುತ್ತಿದ್ದಾರೆ. ‘ರಣವಿಕ್ರಮ’ ನಂತರ ಮತ್ತೆ ಪವನ್ ಒಡೆಯರ್ ಹಾಗೂ ಪುನೀತ್ ರಾಜ್ ಕುಮಾರ್ ಜೋಡಿ ಒಂದಾಗಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.

Facebook Auto Publish Powered By : XYZScripts.com