‘ಪತಿ ಬೇಕು.ಕಾಂ’ ಸಿನಿಮಾ

ಶೀತಲ್ ಶೆಟ್ಟಿ ನಟನೆಯ ‘ಪತಿ ಬೇಕು.ಕಾಂ’ ಸಿನಿಮಾ ನಿನ್ನೆ ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಮಧ್ಯಮ ವರ್ಗದ ಭಾಗ್ಯ ಎಂಬ ಒಬ್ಬ ಹುಡುಗಿಯ ಕಥೆ ಇಲ್ಲಿದೆ.

ಮದುವೆ ವಯಸ್ಸಿಗೆ ಬಂದ ಮಗಳಿಗೆ ಗಂಡು ಹುಡುಕುವುದರಲ್ಲಿ ಬಸವಳಿಯುವ ಬಹುತೇಕ ಅಪ್ಪ ಅಮ್ಮಂದಿರ ಕಥೆಯಿದು. ಮನರಂಜನೆಯನ್ನು ಪ್ರಧಾನವಾಗಿ ಇಟ್ಟುಕೊಂಡಿರುವ ಈ ಸಿನಿಮಾ ಹೆಚ್ಚು ನಗಿಸುತ್ತದೆ. ಒಂದು ಕಡೆ ಇದು ಸಿನಿಮಾಗೆ ವರವೂ ಹೌದು, ಶಾಪವೂ ಹೌದು ಆಗಿದೆ. ಯಾಕೆಂದರೆ, ಕೆಲವರಿಗೆ ಈ ಅಂಶ ಇಷ್ಟ ಆಗಿದ್ದರೆ, ಇನ್ನು ಕೆಲವರಿಗೆ ಈ ಅಂಶ ಕಿರಿ ಕಿರಿ ಎನಿಸಿದೆ.

ಅಂದಹಾಗೆ, ‘ಪತಿ ಬೇಕು ಡಾಟ್.ಕಾಂ’ ಸಿನಿಮಾ ವೀಕ್ಷಿಸಿದ ವಿಮರ್ಶಕರು ಈ ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

ಮಧ್ಯಮ ವರ್ಗದ ಹುಡುಗಿಯ ಕನಸು ಕನವರಿಕೆ: ವಿಜಯ ಕರ್ನಾಟಕ

”ಭಾಗ್ಯ (ಶೀತಲ್ ಶೆಟ್ಟಿ) ಮಧ್ಯಮ ವರ್ಗದ ಹುಡುಗಿ. ಮದುವೆಗಾಗಿ 60ಕ್ಕೂ ಹೆಚ್ಚು ಹುಡುಗರನ್ನು ರಿಜೆಕ್ಟ್ ಮಾಡಿದ್ದಾಳೆ. ಕಾರಣ ವರದಕ್ಷಿಣೆ. ಇದಕ್ಕಾಗಿ ರೋಸಿ ಹೋಗುವ ಭಾಗ್ಯ ಅರೆಂಜ್ಡ್ ಮ್ಯಾರೇಜ್ ಬಿಟ್ಟು, ಲವ್‌ ಮ್ಯಾರೇಜ್ ಆಗಲು ಹೊರಡುತ್ತಾಳೆ. ಅಲ್ಲೂ ಸರಿಯಾದ ಹುಡುಗ ಸಿಗದೇ ವಿಫಲಳಾಗುತ್ತಾಳೆ. ಹೇಗಾದರೂ ಮಾಡಿ ಮದುವೆ ಆಗಲೇಬೇಕೆಂದು ಸುಳ್ಳಿಗೆ ಮೊರೆ ಹೋಗುತ್ತಾಳೆ. ಒಳ್ಳೆಯ ಹುಡುಗನನ್ನು ಪಟಾಯಿಸಲು ಸುಳ್ಳಿನ ಜಾಲದೊಳಗೆ ಸಿಲುಕಿಕೊಳ್ಳುತ್ತಾಳೆ. ಅದರಿಂದಾಗಿ ಅವಳಿಗೆ ತೊಂದರೆಗಳು ಎದುರಾಗುತ್ತವೆ. ಇದರಿಂದ ಆಕೆ ಹೇಗೆ ಪಾರಾಗುತ್ತಾಳೆ ಎನ್ನುವುದೇ ಸಿನಿಮಾ. ನಿರೂಪಕಿಯಾಗಿ ನೋಡುಗರ ಮನ ಗೆದ್ದಿದ್ದ ಶೀತಲ್ ಶೆಟ್ಟಿ ತಮ್ಮ ನೈಜಾಭಿನಯದಿಂದ ಗಮನ ಸೆಳೆಯುತ್ತಾರೆ.” – ಹರೀಶ್ ಬಸವರಾಜು

ಹಳೇ ಸಮಸ್ಯೆಯ ಹೊಸ ಮುಖ – ಉದಯವಾಣಿ

”ವರದಕ್ಷಿಣೆ ಸಮಸ್ಯೆಯನ್ನಿಟ್ಟುಕೊಂಡು ಹಲವು ಚಿತ್ರಗಳು ಇದುವರೆಗೂ ಬಂದಿವೆ. ಇಲ್ಲಿ ವಿಷಯ ಗಂಭೀರವಾಗಿದ್ದರೂ, ರಾಕೇಶ್ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಹಲವು ಟ್ವಿಸ್ಟ್ ಗಳನ್ನಿಟ್ಟು, ಮಜವಾದ ಸನ್ನಿವೇಶಗಳನ್ನು ಸೇರಿಸಿ, ಚಿತ್ರದುದ್ದಕ್ಕೂ ನಗಿಸುವ ಪ್ರಯತ್ನ ಮಾಡಿದ್ದಾರೆ. ಅವರ ಉದ್ದೇಶವೇನೋ ಚೆನ್ನಾಗಿದೆ. ಆದರೆ, ಜನ ಚಿತ್ರದುದ್ದಕ್ಕೂ ಖುಷಿಪಡುತ್ತಾರೆ ಎಂದು ಹೇಳುವುದು ಕಷ್ಟ. ಶೀತಲ್ ಶೆಟ್ಟಿ ಇದುವರೆಗೂ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣವಾಗಿ ಕಾಣಿಸಿಕೊಂಡಿರುವ ಅವರು, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದುದ್ದಕ್ಕೂ ಲವಲವಿಕೆಯಿಂದ ಕಾಣಿಸಿಕೊಂಡಿರುವ ಅವರು, ಅದೇ ಕಾರಣಕ್ಕೆ ಇಷ್ಟವಾಗುತ್ತಾರೆ.” – ಚೇತನ್ ನಾಡಿಗೇರ್

ಶಿಥಿಲ ಕಥೆಗೆ ಶೀತಲ ಕುಸುರಿ – ಕನ್ನಡ ಪ್ರಭ

”ನಿರ್ದೇಶಕ ರಾಕೇಶ್ ಅವರ ವರ್ತನೆ ವಿರುದ್ಧ ಸಮರ ಸಾರಿದ್ದಾರೆ ವರದಕ್ಷಿಣೆ ಯಿಂದಲೇ ಮಧ್ಯಮ ವರ್ಗದ ಹೆಣ್ಣು ಮಕ್ಕಳ ಕುಟುಂಬ ಕಷ್ಟಪಡುತ್ತದೆ ಅನ್ನುವುದು ಅವರ ಐಡಿಯಾ ಆ ಒಂದು ಕಾರಣದಿಂದ ಅವರು ಆಚೆ ಹೋಗಲ್ಲ ಹೆಣ್ಣು ನೋಡಲು ಬಂದ ಅರವತ್ತೊಂದು ಕಂಡು ಮಕ್ಕಳು ವರದಕ್ಷಿಣೆ ಯಿಂದಲೇ ಹರಿವು ಮುರಿದುಕೊಂಡರು ಎಂದು ನಂಬಿಸುತ್ತಾರೆ ಇಂಟರೆಸ್ಟಿಂಗ್ ಕಾನ್ಸೆಪ್ಟ್ ಚಿತ್ರದ ಜೀವನ ಎಲ್ಲದಕ್ಕಿಂತ ಹೆಚ್ಚಾಗಿ ಇದೊಂದು ಕಾಮಿಡಿ ಸಿನಿಮಾ ಕಲಾವಿದರ ಟೈಮ್ ಮಗುವಿಗೂ ನೋಡುಗರನ್ನು ಕೈ ಕೈ ಹಿಡಿದು ಕರೆದೊಯ್ಯುತ್ತದೆ ಒಂದೊಳ್ಳೆ ಕಾನ್ಸೆಪ್ಟು ದಾರಿ ತಪ್ಪಿದರೆ ಬರೀ ಕಾಮಿಡಿಯಾಗಿ ಹೇಗೆ ಉಳಿದುಕೊಳ್ಳುತ್ತದೆ ಎನ್ನುವುದಕ್ಕೆ ಈ ಚಿತ್ರವನ್ನು ಉದಾಹರಣೆ ಪ್ರದೇಶದ ನೋಡುಗರನ್ನು ಗಳಿಸಬೇಕು ಎಂಬ ಆತ ತೊಟ್ಟಿದ್ದಾರೆ ನಿರ್ದೇಶಕರು”. – ರಾಜೇಶ್ ಶೆಟ್ಟಿ

ಪತಿಬೇಕು.ಕಾಂ ಚಿತ್ರ ವಿಮರ್ಶೆ- ಟೈಮ್ಸ್ ಆಫ್ ಇಂಡಿಯಾ

A film dealing with a female protagonist, and her trials and tribulations with love and marriage is quite rare. A popular subject for romcoms in the West, this is a story line that offers a lot of scope for entertainment. While the film has earnest intentions, there are times where it lacks the finesse to carry it through.

Pathibeku.com is a sincere attempt at a female-oriented romcom with a series of comedy of errors. The film lags at times and might not be the most technically competent one, but it still has its heart in its place and can entertain if you are the sort who likes to see the woman at the helm of the affairs.

ನೀವು ನೋಡಿ ಕಮೆಂಟ್ ಮಾಡಿ

ಇದಿಷ್ಟು ಸಿನಿಮಾ ನೋಡಿದ ವಿಮರ್ಶಕರು ಹೇಳಿರುವ ಮಾತು. ನೀವು ‘ಪತಿಬೇಕು.ಕಾಂ’ ಸಿನಿಮಾ ನೋಡಿ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Facebook Auto Publish Powered By : XYZScripts.com