ನ್ಯೂ ಲುಕ್ನಲ್ಲಿ ಶಾಲೆಗೆ ಎಂಟ್ರಿಯಾದ ರಿಷಭ್ ಶೆಟ್ಟಿ!?

ಸಿನಿಮಾಡೆಸ್ಕ್:ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸಿನಲ್ಲಿರುವ ನಿರ್ದೇಶಕ ರಿಷಭ್ ಶೆಟ್ಟಿ ಮುಂದಿನ ಚಿತ್ರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಕೊಡುಗೆ: ರಾಮಣ್ಣ ರೈ.

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ, ಆದ್ರೆ ಈ ಸಿನಿಮಾದಲ್ಲಿ ಸುದೀಪ್ ಅಭಿನಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಈ ನಡುವೆ ರಿಷಭ್ ಶೆಟ್ಟಿ ತಮ್ಮ ಹೊಸ ಸಿನಿಮಾದ ಲೊಕೇಶನ್ ಹುಡುಕಾಟ ಶುರುಮಾಡಿದ್ದಾರೆ.

ಲೇಖಕ ಕಿರಣ್ ರಾಜ್ ಮತ್ತು ಒಂದಷ್ಟು ಗೆಳೆಯರ ಜೊತೆ ಸೇರಿ ಊರೂರು ಸುತ್ತುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಒಂದಷ್ಟು ಊರುಗಳಿಗೆ ಭೇಟಿ ನೀಡಿದ್ದಾರೆ.

ಸಿನಿಮಾ ತಂಡಕ್ಕೆ ತಮ್ಮ ಕಲ್ಪನೆಯ ಲೊಕೇಶನ್ ಸಿಕ್ಕಿರುವ ಹಾಗಿದೆ. ಕಿರಿಕ್ ಪಾರ್ಟಿ ಮೂಲಕ ಕಾಲೇಜು ಬದುಕಿನ ಝಲಕ್ ತೋರಿಸಿದ್ದ ರಿಷಭ್ ಶೆಟ್ಟಿ ಈಗ ಎಲ್ಲರನ್ನೂ ಹಿರಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋಗುವುದು ಗ್ಯಾರಂಟಿಯಾಗಿದೆ.

Courtesy: Kannada News Now

Facebook Auto Publish Powered By : XYZScripts.com