ನೋಟ್ ಬ್ಯಾನ್ ಎಫೆಕ್ಟ್ ಕುರಿತ ಕಿರುಚಿತ್ರ ತೆರೆಗೆ

ಟಾಲಿವುಡ್ ನಲ್ಲಿ ರಿಲೆವೆನ್ಸ್ ವಿಚಾರಗಳ ಕುರಿತಂತೆ ಚಿತ್ರಗಳು ರೆಡಿಯಾಗುತ್ತಿರುವುದು ವಿಶೇಷವಲ್ಲ. ಆದರೆ ಇಲ್ಲೊಬ್ಬ ಕಿರುಚಿತ್ರ ನಿರ್ದೇಶಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಮಾತ್ರವಲ್ಲ, ಇವರನ್ನು ಸಖತ್ ಪಾಸ್ಟ್ ನಿರ್ದೇಶಕ ಎಂದರೆ ತಪ್ಪಾಗಲಾರದು. ಹೌದು ಟಾಲಿವುಡ್ ನ ನಿರ್ದೇಶಕ ಸುವೆಂದು ಘೋಷ್ ಇದೀಗ ಬೆಂಗಾಲಿ ಭಾಷೆಯಲ್ಲಿ ನೋಟು ಅಮಾನ್ಯ ವಿಚಾರದ ಕುರಿತಂತೆ ಕಿರುಚಿತ್ರ ತಯಾರಿಸಿ ಭೇಷ್ ಎನಿಸಿಕೊಂಡಿದ್ದಾರೆ.
ನೋಟು ಬ್ಯಾನ್ ವಿಚಾರದ ಈ ಚಿತ್ರಕ್ಕೆ ನಿರ್ದೇಶಕ ಸುವೆಂದು ಶೂನ್ಯೊಟ (ಖಾಲಿ ) ಎಂದು ಹೆಸರಿಟ್ಟಿದ್ದು, ಶುಕ್ರವಾರ ಈ ಚಿತ್ರ ಬಿಡುಗಡೆಯಾಗಲಿದೆ. ಯಾಕೆಂದರೆ 500 ಹಾಗೂ ಸಾವಿರ ರೂಪಾಯಿಯ ಹಳೆ ನೋಟುಗಳನ್ನು ಬದಲಾಯಿಸಲು ಡಿಸೆಂಬರ್ 31 ಕೊನೆ ದಿನವಾಗಿದ್ದರಿಂದ ಅದಕ್ಕಿಂತ ಒಂದು ದಿನ ಮುಂಚೆ ಈ ಚಿತ್ರ ಬಿಡುಗಡೆಗೊಳಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರಂತೆ.
42ರ ಹರೆಯದ ನಿರ್ದೇಶಕ ಘೋಷ್ ಈ ಬಾರಿ ಉತ್ತಮ ಕಿರುಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಪ್ರಧಾನ ನರೇಂದ್ರಮೋದಿ ನೋಟ್ ಬ್ಯಾನ್ ಯೋಜನೆಯನ್ನು ಪ್ರಕಟಿಸಿ ತಿಂಗಳುಗಳೇ ಕಳೆದಿದೆ. ಈ ಅವಧಿಯಲ್ಲಿ ಜನರಿಗಾದ ಗಲಿಬಿಲಿ, ಬ್ಯಾಂಕ್ ನಲ್ಲಿನ ಕ್ಯೂ, ಇತ್ಯಾದಿ ಇತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ತಯಾರಾಗಿರುವ ಚಿತ್ರವನ್ನು ನವೆಂಬರ್ 26ಕ್ಕೆ ಆರಂಭಿಸಿ, 18 ದಿನಗಳ ಶೂಟಿಂಗ್ ಮುಗಿಸಿ ಇದೀಗ ಬಿಡುಗಡೆಗೆ ಸಿದ್ದಗೊಳಿಸುತ್ತಿದ್ದಾರೆ ನಿರ್ದೇಶಕರು..
Courtesy: Balkani News

Facebook Auto Publish Powered By : XYZScripts.com