ನೆಗೇಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿರುವ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ

‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಸದ್ದು ಮಾಡಿದ ರಾಜ್ ಬಿ ಶೆಟ್ಟಿ ಪ್ರೇಕ್ಷಕರ ಮನಸ್ಸನ್ನು ಗೆದ್ದು ನಿರ್ದೇಶನದಲ್ಲಿ ಸೈ ಎನಿಸಿಕೊಂಡಿದ್ದರು.

ಸದ್ಯ, ರಾಜ್ ಬಿ ಶೆಟ್ಟಿ ಪುನೀತ್ ನಿರ್ಮಾಣದ ಮಾಯಾ ಬಜಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಅಮ್ಮಚ್ಚಿಯ ನೆನಪುಗಳು ಎಂಬ ಸಿನಿಮಾದಲ್ಲಿ ನೆಗೇಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೂಳ್ಯ ಸೇರಿದಂತೆ ಹಲವು ಕಡೆ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ. ಒಬ್ಬ ದೇವರ ಬಗ್ಗೆ ನಂಬಿಕೆ ಇಲ್ಲದವನು ದೇವರನ್ನು ನಂಬುವಂತಹ ಸ್ಥಿತಿಗೆ ಬಂದರೆ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥೆ.

ಅಮ್ಮಚ್ಚಿ ಚಿತ್ರದ ಲುಕ್ ಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದೇನೆ ಇರಲಿ ಒಂದು ಮೊಟ್ಟೆಯ ಕಥೆ ಹೇಳಿ ಸೈ ಎನಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ ಈಗ ನೆಗೇಟಿವ್ ರೋಲ್ ನಲ್ಲಿ ಯಾವ ಲೆವೆಲ್ ಗೆ ಸದ್ದು ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Auto Publish Powered By : XYZScripts.com