‘ನೀರ್ ದೋಸೆ’ ಕುಮುದ ಹೊಸ ಸಿನಿಮಾದಲ್ಲಿ ಚಿರು ಜೊತೆ ರೊಮ್ಯಾನ್ಸ್!

ಸ್ಯಾಂಡಲ್ ವುಡ್ ಚೆಲುವೆ ‘ಹರಿಪ್ರಿಯಾ’ ನೀರ್ ದೋಸೆ ಸಿನಿಮಾದ ಕುಮುದಾ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಮತ್ಯಾವ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ. ಅಂದಹಾಗೆ ಹರಿಪ್ರಿಯಾ ನೀರ್ ದೋಸೆ ಸಿನಿಮಾದ ನಂತರ ಬೇರೆ ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲವಂತೆ, ಕಾರಣ ಬಂದ ಎಲ್ಲಾ ಪಾತ್ರಗಳು ಕುಮುದ ಪಾತ್ರದ ಹಾಗೆ ಇತ್ತಂತೆ. ಹಾಗಾಗಿ ಯಾವ ಸಿನಿಮಾವನ್ನು ಕೂಡ ಒಪ್ಪಿಕೊಂಡಿರಲಿಲ್ಲ. ಆದರೆ ಕೆಲ ಸಮಯದ ನಂತರ ಹರಿಪ್ರಿಯ ಚಿರಂಜೀವಿ ಸರ್ಜಾ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಹೊಸ ಸಿನಿಮಾಕ್ಕೆ ಗುರುದೇಶಪಾಂಡೆ ನಿರ್ದೇಶನ ಮಾಡುತ್ತಿದ್ದು, ಹರಿಪ್ರಿಯಾ ಜೊತೆ ಕಾವ್ಯ ಶೆಟ್ಟಿ ಕೂಡ ಈ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಇದೊಂದು ಟ್ರಯಾಂಗಲ್ ಲವ್ ಸ್ಟೋರಿಯಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆಯಂತೆ. ಚಿರು ಇದೇ ಮೊದಲ ಬಾರಿಗೆ ಇಂತಹದ್ದೊಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ.

ಈ ಸಿನಿಮಾದಲ್ಲಿ ಒಂದಷ್ಟು ಮಾಸ್ ಡೈಲಾಗ್ ಇದ್ದು, ಈ ಚಿತ್ರಕ್ಕಾಗಿ ಬಹಳ ತಯಾರಿ ನಡೆಸಿದ್ದಾರಂತೆ ಚಿರು ಸರ್ಜಾ. ಚಿರು ಹಾಗೂ ಗುರುದೇಶಪಾಂಡೆ ಕಾಂಬಿನೇಷನ್ ನ ಎರಡನೇ ಸಿನಿಮಾ ಇದಾಗಿದ್ದು, ಮೊದಲು ಈ ಜೋಡಿ ರುದ್ರತಾಂಡವ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

Courtesy: Kannada News Now

Facebook Auto Publish Powered By : XYZScripts.com