ನೀತು ಎರ್ರಾಬಿರ್ರಿ ಮಡಗಿದ್ದು ಈಗ ವೈರಲ್ ಆಯ್ತು ನೋಡಿ

ಈವರೆಗೆ ನಾನಾ ಬಗೆಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನೀತು ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಎಸಿಪಿ
ಶಿವಾನಿ ಹೆಸರಿನ ಈ ಪಾತ್ರದಲ್ಲಿ ನೀತು ನಿಜವಾದ ಪೊಲೀಸ್ ಅಧಿಕಾರಿಯನ್ನೂ ನಾಚಿಸುವಂತೆ ನಟಿಸಿದ್ದಾರೆ. ಮಾತ್ರವಲ್ಲ, ಪಕ್ಕಾ ಆಕ್ಷನ್ ಹೀರೋಗಳಂತೆ ಫೈಟ್ ಕೂಡಾ ಮಾಡಿದ್ದಾರೆ. ಈ ಚಿತ್ರ ಬಿಡುಗಡೆಯಾದ ಮೇಲೆ ಒಂದಷ್ಟು ಮಹಿಳಾ ಪ್ರಧಾನ ಸಿನಿಮಾಗಳು ನೀತು ಅವರನ್ನು ಅರಸಿಬರೋದರಲ್ಲಿ ಸಂಶಯವಿಲ್ಲ ಅನ್ನೋದು ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಅವರ ಅಭಿಪ್ರಾಯ.
ನೀತು ಪೊಲೀಸ್ ಗೆಟಪ್‍ನಲ್ಲಿರುವ ಫೋಟೋಗಳು ಆನ್‍ಲೈನ್‍ನಲ್ಲಿ ಕೂಡಾ ವೈರಲ್ ಆಗಿವೆ. `ಬೇಟೆ’, `ಅಂಗಾರಕ’, `ಯಾರದು?’ ಚಿತ್ರಗಳನ್ನು ನಿರ್ದೇಶಿದ್ದ ಶ್ರೀನಿವಾಸ ಕೌಶಿಕ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ, ಸಂಜೀವರೆಡ್ಡಿ ಸಂಕಲನ, ಕೌರವವೆಂಕಟೇಶ್ ಸಾಹಸ, ರವಿಕುಮಾರ್ ಕಥೆ, ಜಾನಪದ ಸಾಹಿತ್ಯ ಮತ್ತು ಸಹನಿರ್ದೇಶನ, ಸುರೇಶ್‍ಕಣ್ಣ ಸಹನಿರ್ಮಾಪಕರು.
ರವಿಕುಮಾರ್, ನೀತು, ರಚನಾ, ಯತಿರಾಜ್, ಗಿರೀಶ್‍ಜತ್ತಿ, ಪ್ರಭಾಕರ್ .ಎಂ, ಸಂಗೀತ, ಚಂದ್ರಕಾಂತ್, ಮೈಕೊ ಶೀವು, ಮಾರುತಿ ರಾಜ್ ಮುಂತಾದವರ ತಾರ ಬಳಗವಿದೆ. ಈ ಹಿಂದೆ ಟ್ಯಾಕ್ಸಿ ನಂ.1, ಚಿಲ್ರೆ ಶೋಕಿ, ಹಾರೋಹಕ್ಕಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಪ್ರಭಾಕರ್.ಎಂ ಇದೀಗ ಥ್ರಿಲ್ಲರ್ ಕ್ರೈಂ ಸಸ್ಪೆನ್ಸ್ ಕಥೆ ಹೊಂದಿರುವ ‘ಮೊಂಬತ್ತಿ’ ಪ್ರೊಡ್ಯೂಸರ್.
ಸದ್ಯಕ್ಕೆ ಮೊಂಬತ್ತಿ ಮಾತಿನ ಭಾಗದ ಚಿತ್ರೀಕರಣ ಪೂರೈಸಿದೆ. ಉಳಿದ ನಾಲ್ಕು ಹಾಡುಗಳ ಚಿತ್ರೀಕರಣಕ್ಕಾಗಿ ಸಕಲೇಶಪುರ, ಚಿಕ್ಕಮಂಗಳೂರು, ಶಿವಮೊಗ್ಗ ಸುತ್ತಮುತ್ತ ಸದ್ಯದಲ್ಲಿ ನಡೆಯಲಿದೆ.
Courtesy: Balkani News

Facebook Auto Publish Powered By : XYZScripts.com