ನಿವೇದಿತಾ ಗೌಡ ವಿಷಯಕ್ಕೆ ಸಮೀರ್ ಆಚಾರ್ಯ ಪೊಲೀಸ್ ಬಳಿ ಹೋಗಿದ್ದೇಕೆ?… ಇಲ್ಲಿ ಓದಿ

ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ, ಸಮೀರ್ ಆಚಾರ್ಯ ಹಾಗೂ‌ ನಿವೇದಿತಾ ಗೌಡ ಆತ್ಮೀಯ ಸ್ನೇಹಿತರು. ಈ‌ ಸ್ನೇಹ ದೊಡ್ಡ ಮನೆಯಿಂದ ಹೊರ ಬಂದ್ಮೇಲೆ ಮುಂದುವರೆಯಿತು. ಸದ್ಯ‌ ಚಂದನ್ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.  ಆದರೆ ಆಚಾರ್ಯ ಹಾಗೂ ನಿವೇದಿತಾ ಗೌಡ ಸ್ನೇಹದಲ್ಲಿ ಇದ್ದಕ್ಕಿದ್ದಂತೆ ಏನಾಯಿತು..!!?

ನಿವೇದಿತಾರನ್ನು ನೋಡಲು ಸಮೀರ್ ಮೈಸೂರು ಕಡೆ ಮುಖ ಮಾಡಿದರು. ಹೀಗೆ ಮೈಸೂರಿಗೆ ಹೋದವರು ಸೀದಾ‌ ಪೋಲೀಸರನ್ನು ಭೇಟಿ ಮಾಡಿದರು. ಹೀಗೆ ಭೇಟಿ‌‌ ಮಾಡಲು ಕಾರಣ ನಿವೇದಿತಾ ಗೌಡ. ಹಾಗಿದ್ರೆ ನಿವೇದಿತಾ ಗೌಡ ಆಚಾರ್ಯ ಅವರಿಗೆ ಏನು‌ ಮಾಡಿದರು.. ?

ನಿವೇದಿತಾ ಗೌಡ ಅವರ ಮನೆ ಹುಡುಕುತ್ತಾ ಸಮೀರ್ ಆಚಾರ್ಯ ಮೈಸೂರಿಗೆ ಹೊರಟವರು ಮನೆ ತಿಳಿಯದೆ ಗೊಂದಲಕ್ಕೆ ಸಿಲುಕಿದರು. ನಂತರ ಮಾಡಿದ್ದೇನು ಗೊತ್ತಾ? ಸೀದಾ ಪೊಲೀಸರು ಬಳಿ ಹೋಗಿ ನಿವೇದಿತಾ ಗೌಡ ಮನೆ ಎಲ್ಲಿ ಎಂದು ಕೇಳಿ ಬಿಟ್ರು. ಹೌದು, ಇದು ನಿಜ, ಆಚಾರ್ಯ ಅವರು ಮೈಸೂರು ಪೊಲೀಸರ ಬಳಿ ಹೋಗಿ ನಿವೇದಿತಾ ಗೌಡ ಅವರ ಮನೆ ಎಲ್ಲಿದೆ ಎಂದು ನಿಮಗೆ ಏನಾದರು ತಿಳಿದಿದ್ರೆ ಹುಡುಕಿ ಕೊಡಿ ಎಂದು ಕೇಳಿಕೊಂಡರು. ಇದಕ್ಕೆ ಪೋಲಿಸರು ಕಂಟ್ರೋಲ್ ರೂಂ ಮೂಲಕ ಇಡೀ ಮೈಸೂರು ಕೇಳುವಂತೆ ನಿವೇದಿತಾ ಗೌಡ ಮನೆ ಕುರಿತು ಪ್ರಕಟಿಸಿದರು. ನಿವೇದಿತಾಗೆ ಸ್ವತಃ ಕಾಲ್ ಮಾಡಿ‌ ಮನೆಯ ವಿಳಾಸ‌ ಕೇಳಬಹುದಿತ್ತು ಆದರೆ ನಿವೇದಿತಾಗೆ ಸರ್ಪೈಸ್ ನೀಡಬೇಕೆಂಬ ಕಾರಣಕ್ಕೆ‌ ಪೊಲೀಸರ ಮೂಲಕ ನಿವೇದಿತಾ ಅವರನ್ನು ಭೇಟಿಯಾಗಿದ್ದಾರೆ. ಇದನ್ನು ಸ್ವತಃ ನಿವೇದಿತಾ ಹಾಗೂ ಸಮೀರ್ ಆಚಾರ್ಯ ತಮ್ಮ‌ ಫೇಸ್‌ಬುಕ್‌ ಲೈವ್ ನಲ್ಲಿ‌ ಹೇಳಿಕೊಂಡಿದ್ದಾರೆ.

Facebook Auto Publish Powered By : XYZScripts.com