ನಿರಂಜನ್ ನಿರ್ಗಮಿಸಿ ಪ್ರಥಮ್ ಉಳಿದರು ; ಏನಿದು ಬಿಗ್ ಬಾಸ್ ನಿರ್ಧಾರ?

ಪ್ರಥಮ್ ಗೆ ಮತ್ತೆ ಮತ್ತೆ ಜೀವದಾನ. ಈ ಹಿಂದೆ 8 ಬಾರಿ ಪ್ರಥಮ್ ನಾಮಿನೇಟ್ ಆದರೂ, ತಮ್ಮ ಜೊತೆಗಿದ್ದವರೇ ಬಿಗ್ ಬಾಸ್ ಮನೆಯಿಂದ ಹೊರ ನಡೆದರೂ. 8 ನೇ ಬಾರಿಯೂ ಅವರು ಸೇಫ್ ಆಗಿದ್ದೂ ಪವಾಡ 7 ನೇ ಬಾರಿಗೆ ನಡೆದ ನಾಮಿನೇಟ್ ವೇಳೆ, ಅದಾಗಲೇ ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದ ಓಂ ಪ್ರಕಾಶ್ ಅವರ ಎಲಿಮಿನೇಟ್ ಅನಿವಾರ್ಯವಾದುದರಿಂದ ಪ್ರಥಮ್ ಬಿಗ್ ಬಾಸ್ ಮನೆಯಲ್ಲೇ ಉಳಿದರು.
ಕಳೆದ ವಾರ ಭಿನ್ನ ವಾತಾವರಣ ಇತ್ತು. ಇಡೀ ವಾರ ಡಿಕ್ಟೇಟರ್ ಆಗಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಬೆವರಿಳಿಸಿದ್ದರು. ಆ ಕಾರಣಕ್ಕೆ ಎಲ್ಲರು ಪ್ರಥಮ್ ಬಗ್ಗೆ ಮುನಿಸಿಕೊಂಡಿದ್ದರು. ಬಹುಷಃ ಆ ಕಾರಣಕ್ಕಾಗಿಯೇ ಪ್ರಥಮ್ ಈ ಶನಿವಾರವೂ ನಾಮಿನೇಟ್ ಆದರು. ಮೋಹನ್, ನಿರಂಜನ್, ಕೀರ್ತಿ, ಭುವನ್ ಜೊತೆ ಪ್ರಥಮ್ ಕೂಡಾ ಎಲಿಮಿನೇಟ್ ಪಟ್ಟಿಯಲ್ಲಿದ್ದರೂ, ಅದೃಷ್ಟ ಅವರ ಪಾಲಿಗಿತ್ತು. ನಿರಂಜನ್ ಗೆ ಗೆಟ್ ಪಾಸ್ ನೀಡಿದ್ದರಿಂದ, ಪ್ರಥಮ್ ಕೊನೆಗೂ ದಾಖಲೆ ಬರೆದೇಬಿಟ್ಟರು.
‘ಕಲರ್ಸ್ ಕನ್ನಡ’ದ ಬಿಗ್ ಬಾಸ್ ಒಂಥರಾ ಕದನ ಕೌತುಕದ ಅಖಾಡ. ಯಾಕೆಂದರೆ ಯಾರು ಮನೆಯೊಳಗೆ ಬರ್ತಾರೋ? ಯಾರೋ ಮನೆಯಿಂದ ಗೆಟ್ ಪಾಸ್ ಪಡೀತಾರೋಗೊತ್ತಿಲ್ಲ. ಆದರೆ ಪ್ರಥಮ್ ಮಾತ್ರ ಸೋಲಿನ ಅಂಚಿನಿಂದ ಪಾರಾಗ್ತಾನೆ ಇದ್ದಾರೆ. ಇದೀಗ ಅವರು ಕಿರು ತೆರೆ ರಿಯಾಲಿಟಿ ಷೋ “ಬಿಗ್ ಬಾಸ್” ನಲ್ಲಿ ದಾಖಲೆ ಬರೆದೆ ಬಿಟ್ಟರು.
ನಾಮಿನೇಟ್ ನಲ್ಲಿ ಪ್ರಥಮ್ ಹೆಸರು ಪ್ರಥಮದಲ್ಲಿರುತ್ತದೆ. ಪ್ರತೀ ಶನಿವಾರ ನಾಮಿನೇಟ್ ಆಗುವವರ ಪಟ್ಟಿಯಲ್ಲಿ ಪ್ರಥಮ್ ಹೆಸರು ಇದ್ದೆ ಇರುತ್ತಿತ್ತು. ಕೊನೆ ಗಳಿಗೆಯಲ್ಲಿ ನಿರ್ಗಮನ ಬಾಗಿಲು ಮುಚ್ಚುತ್ತಿತ್ತು. ಪ್ರಥಮ್ ಅವರು 8 ಬಾರಿ ನಾಮಿನೇಟ್ ಪಟ್ಟಿಯಲ್ಲಿದ್ದರು. 3 ವಾರಗಳ ಹಿಂದೆ ಅವರು ಹುಚ್ಚ ವೆಂಕಟ್ ಅವರಿಂದ ಹೊಡೆತ ತಿಂದ ಪ್ರಸಂಗವಂತೂ, ಎಲಿಮಿನೇಟ್ ಖಚಿತ ಎಂಬ ಸುಳಿವನ್ನು ನೀಡಿತ್ತು. ಆದರೆ ಅವರ ಅದೃಷ್ಟ ಚೆನ್ನಾಗಿತ್ತು.
ಕಳೆದ ವಾರದ ಪ್ರಸಂಗ ಶನಿವಾರ ಅಂತ್ಯಗೊಂಡಾಗ ಪ್ರಥಮ್ ಎಲಿಮಿನೇಟ್ ಆಗ್ತಾರೆ ಅಂತಾನೆ ಎಲ್ಲರೂ ತಿಳಿದರು. ಪ್ರಥಮ್ ಕೂಡಾ ತಾನು ಹೊರಗೆ ಹೋಗೋದು ಖಚಿತ ಅಂತಾನೆ ತಿಳಿದಿದ್ದರು.
ಪ್ರಥಮ್ ಪಾಲಿಗೆ ಮುಂದಿನ ಶನಿವಾರ ಹೇಗಿರುತ್ತೋ..?
‘ಬಿಗ್ ಬಾಸ್ 3’ ನೇ ಆವೃತ್ತಿಯಲ್ಲೂ ಎಲಿಮಿನೇಟ್ ಹಂತಕ್ಕೆ 6 ಬಾರಿ ಬಂದವರೂ ಇದ್ರೂ. ಆ ಎಪಿಸೋಡ್ ನಲ್ಲಿ ಸುನಾಮಿ ಕಿಟ್ಟಿ 6 ಬಾರಿ ನಾಮಿನೇಟ್ ಆಗಿ, ಅಂತಿಮ ಹಂತದಲ್ಲಿ ‘ಬಿಗ್ ಬಾಸ್, ಮನೆಯಿಂದ ನಿರ್ಗಮಿಸಿದ್ದರು. 4 ನೇ ಆವೃತ್ತಿಯ ಕಳೆದ ವಾರದ ಸಂಚಿಕೆಯಲ್ಲಿ ಪ್ರಥಮ್ ಕೂಡಾ 8 ಬಾರಿ ನಾಮಿನೇಟ್ ಆದರು. ಇದೀಗ 9 ನೇ ಬಾರಿಯೂ ನಾಮಿನೇಟ್ ಹಂತಕ್ಕೆ ಬಂದರು ಪ್ರಥಮ್. ಆದರೂ ಎಲಿಮಿನೇಟ್ ಆಗಲಿಲ್ಲ. ಪ್ರಥಮ್ ಸೇಫ್ ಆದರು. ಆದರೆ ಪ್ರಥಮ್ ಪಾಲಿಗೆ ಮುಂದಿನ ಶನಿವಾರ ಹೇಗಿರುತ್ತೋ..? ಕಾದುನೋಡಬೇಕಿದೆ..
Courtesy: Balkani News

Facebook Auto Publish Powered By : XYZScripts.com