ನಿಮ್ಮನ್ನು ನಗಿಸಲು ಮತ್ತೆ ಬರಲಿದ್ದಾರೆ ಡ್ರಾಮಾ ಜೂನಿಯರ್ಸ್

ಜೀ ಕನ್ನಡ ವಾಹಿನಿಯ ಫೇಮಸ್ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ಕಿರುತೆರೆ ಪ್ರೇಕ್ಷಕರನ್ನು ಬಹಳಾನೇ ಅಟ್ರಾಕ್ಟ್ ಮಾಡಿತ್ತು. ಒಬ್ಬರಿಗಿಂತ ಒಬ್ಬರು ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು.

ನಾವು ಹುಟ್ಟಿರೋದೇ ಡ್ರಾಮಾ ಮಾಡೋಕೆ ರಾಗ ಎಳಿತಿದ್ದ 10 ಪ್ರತಿಭಾವಂತ ಮಕ್ಕಳು ಇದೀಗ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ವಿಶ್ಯ ನಿಮಗೆ ಗೊತ್ತಿದೆ. ಆದರೆ ಕಿರುತೆರೆ ಪ್ರೇಕ್ಷಕರಿಗೊಂದು ಮತ್ತೊಂದು ಗುಡ್ ನ್ಯೂಸ್ ಕಾದಿದೆ, ಯೆಸ್ ಅದೇನಪ್ಪ ಅಂದ್ರೆ ಡ್ರಾಮಾ ಜ್ಯೂನಿಯರ್ಸ್ ಪುಟಾಣಿಗಳು ಮತ್ತೆ ನಿಮ್ಮನ್ನು ರಂಜಿಸಲು ಬರುತ್ತಿದ್ದಾರೆ. ಅದೇ ಹಾಸ್ಯ, ಅದೇ ಖುಷಿ, ಮನೋರಂಜನೆ ಮತ್ತೆ ನಿಮಗೆ ಸಿಗಲಿದೆ. ಆದರೆ ಡ್ರಾಮಾ ಮಾಡಲು ಹೊಸ ಪುಟಾಣಿಗಳು ಬರುತ್ತಿದ್ದಾರೆ, ಯೆಸ್.ಡ್ರಾಮಾ ಜ್ಯೂನಿಯರ್ಸ್- ಸೀಸನ್ 2 ಸದ್ಯದಲ್ಲೇ ಶುರುವಾಗಲಿದೆ.ಇದಕ್ಕಾಗಿ ಸದ್ಯದಲ್ಲೇ ಆಡಿಶನ್ ನಡೆಯಲಿದೆ.

Facebook Auto Publish Powered By : XYZScripts.com