ನಿಖಿಲ್ ಕುಮಾರ್ ಸಿನಿಮಾದಿಂದ ಲತಾ ಹೆಗ್ಡೆ ಔಟ್.ಕಾರಣ ಏನ್ ಗೊತ್ತಾ..?

ಮಾಜಿ ಸಿಎಂ ಕುಮಾರ ಸ್ವಾಮಿ ಅವರ ಪುತ್ರ ಜಾಗ್ವಾರ್ ಹೀರೋ ನಿಖಿಲ್ ಕುಮಾರ್ ನಟನೆಯ ಎರಡನೇ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಆದ್ರೆ ಈ ಸಿನಿಮಾಕ್ಕೆ ನಾಯಕಿಯಾಗಿ ಲತಾ ಹೆಗ್ಡೆ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಮದ ಲತಾ ಈ ಸಿನಿಮಾದಲ್ಲಿ ನಟಿಸೋದಿಲ್ಲ, ಹೀಗಂತ ಸ್ವತಹ ಲತಾ ಅವರೇ ಹೇಳಿದ್ದಾರೆ.
ಡೇಟ್ ಸಮಸ್ಯೆಯಿಂದಾಗಿ ನನಗೆ ಆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಸಿನಿಮಾದ ಚಿತ್ರೀಕರಣ ಮೇನಲ್ಲಿ ಪ್ರಾರಂಭವಾಗಲಿದ್ದು, ಈ ವೇಳೆ ‘ಉತ್ಸವ್’ ಚಿತ್ರದ ಚಿತ್ರೀಕರಣ ಬೇರೆ ಶುರುವಾಗಿರುತ್ತದೆ. ಹಾಗಾಗಿ ಎರಡು ಸಿನಿಮಾದ ಶೂಟಿಂಗ್ ಒಂದೇ ಸಮಯದಲ್ಲಿ ನಡೆಯುವುದರಿಂದ ನನಗೆ ನಿಖಿಲ್ ಕುಮಾರ್ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುವುದಿಲ್ಲ ಎಂದು ಲತಾ ಹೇಳಿದ್ದಾರೆ.

ಒಟ್ಟಾರೆ ನಿಖಿಲ್ ಸಿನಿಮಾದಲ್ಲಿ ಲತಾ ನಟಿಸೋಲ್ಲ ಎಂಬುದು ಪಕ್ಕಾ ಆಗಿದೆ. ನಿಖಿಲ್ ಕುಮಾರ್ ಗೆ ಯಾರು ನಾಯಕಿಯಾಗ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Courtesy: Kannada News Now

Facebook Auto Publish Powered By : XYZScripts.com