ನಾಳೆ ‘ಸರ್ಕಾರ್’ ಚಿತ್ರ ತೆರೆಗೆ ಬರಲಿದೆ.. ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಗೆ ಇಲ್ಲಿ ಓದಿ

ಇತ್ತೀಚೆಗೆ ಬರುತ್ತಿರುವ ಬಹುತೇಕರು ಸ್ಯಾಂಡಲ್‍ವುಡ್‍ನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಜತೆಗೆ ಭದ್ರ ನೆಲೆ ಕಾಣಬೇಕು ಎಂಬ ತವಕವನ್ನು ಹೊಂದಿರುತ್ತಾರೆ. ಆ ನಿಟ್ಟಿನಲ್ಲಿ ಬಂದಿರುವ ಯುವ ಪ್ರತಿಭೆ ಜಾಗ್ವಾರ್ ಜಗ್ಗಿ. ಈ ಪ್ರತಿಭೆ ಸರ್ಕಾರ್ ಎಂಬ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಪ್ರವೇಶ ಮಾಡುತ್ತಿದ್ದಾರೆ. ರೌಡಿಸಂ, ತಾಯಿ ಸೆಂಟಿಮೆಂಟ್ ಹಾಗೂ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರವನ್ನು ಮಂಜುಪ್ರೀತಂ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ನಾಯಕನ ತಾಯಿ ಪಾರ್ವತಿ ಹೊಸ್‍ಮಠ್ ನಿರ್ಮಿಸಿದ್ದಾರೆ.

ಇತ್ತೀಚೆಗಷ್ಟೇ ಮಿಸ್ಟರ್ ಎಲ್‍ಎಲ್‍ಬಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಲೇಖಾಚಂದ್ರ ಈ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಿಡುಗಡೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಾಜರಿದ್ದು, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. ಆರಂಭದಲ್ಲಿ ನಾಯಕ ನಟ ಹಾಗೂ ನಿರ್ಮಾಪಕ ಜಾಗ್ವಾರ್ ಜಗ್ಗಿ ಮಾತನಾಡಿ, ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ನಾನು ವರ್ಕ್ ಮಾಡುತ್ತಿದ್ದೇನೆ. ಸಿನಿಮಾ ನನ್ನ ಬಹುದಿನಗಳ ಕನಸು. ಗೆಳೆಯ ಸಾಹಿಲ್ ಕಡೆಯಿಂದ ನಿರ್ದೇಶಕರ ಪರಿಚಯವಾಯಿತು. ಅವರು ಈ ಕಥೆ ಹೇಳಿದಾಗ, ಅದು ನನಗೆ ಹಿಡಿಸಿತು ರೌಡಿಸಂ, ಮದರ್ ಸೆಂಟಿಮೆಂಟ್, ಲವ್, ಫ್ರೆಂಡ್‍ಶಿಪ್‍ನಂಥ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ ಎಂದು ಹೇಳಿದರು. ನಂತರ ಚಿತ್ರದ ನಿರ್ದೇಶಕ ಮಂಜು ಪ್ರೀತಂ ಮಾತನಾಡುತ್ತ, ಈ ಸಿನಿಮಾ ಆರಂಭಕ್ಕೂ ಮುನ್ನ ಒಂದು ಪ್ರೋಮೋ ಮಾಡಿಕೊಂಡು ಸತೀಶ್ ಆರ್ಯನ್ ಅವರ ಬಳಿ ಹೋದೆವು. ಒಳ್ಳೆ ಹಾಡುಗಳನ್ನು ಅವರು ಮಾಡಿಕೊಟ್ಟರು. ಶೂಟಿಂಗ್ ಸಮಯದಲ್ಲಿ ಸ್ವಲ್ಪ ಭಯ ಇತ್ತು. ಶೋಭರಾಜ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಯಮುನ ಸತ್ಯಜಿತ್ ಹಾಗೂ ಉಗ್ರಂ ಮಂಜು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮನುಷ್ಯ ತನ್ನ ಜೀವನದಲ್ಲಿ ಸಂದರ್ಭದ ಸುಳಿಗೆ ಸಿಕ್ಕಿ ಏನೇನೆಲ್ಲ ಕಳೆದುಕೊಳ್ತಾನೆ, ಚಿಕ್ಕವನಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಬಂದ ನಾಯಕನನ್ನು ಒಬ್ಬ ಮನುಷ್ಯ ಸಾಕುತ್ತಾನೆ. ರೌಡಿಯಾಗಿ ಬೆಳೆಯುವ ನಾಯಕನ ಜೀವನದ ಪಯಣ ಈ ಚಿತ್ರದಲ್ಲಿದೆ ಎಂದು ಚಿತ್ರದ ಬಗ್ಗೆ ಹೇಳಿದರು.

Facebook Auto Publish Powered By : XYZScripts.com