ನಾಯಕನಾಗಿ ನಟಿಸಲಿರುವ ರಿಷಬ್ ಶೆಟ್ಟಿ

ನಾಯಕನಾಗಬೇಕು ಎಂಬ ಕನಸನ್ನು ಹೊತ್ತುಕೊಂಡು ಗಾಂಧಿನಗರಕ್ಕೆ ಬಂದ ರಿಷಬ್ ಶೆಟ್ಟಿ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದರು.

13 ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ಪ್ರವೇಶಿಸಿದ ರಿಷಬ್ ಶೆಟ್ಟಿಗೆ ನಟನಾಗುವ ಅವಕಾಶ ಸಿಗಲಿಲ್ಲ. ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸದರಾದರೂ ಪೂರ್ಣ ಪ್ರಮಾಣದ ಹೀರೋ ಆಗಲು ಸಾಧ್ಯವಾಗಿರಲಿಲ್ಲ. ಆದರೆ 13 ವರ್ಷಗಳ ನಂತರ ರಿಷಬ್ ಶೆಟ್ಟಿ ಈಗ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲಿದ್ದಾರೆ.ನಿರ್ದೇಶಕ ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಫುಲ್ ಟೈಮ್ ಹೀರೋ ಆಗಿ ಮಿಂಚಲಿದ್ದಾರೆ.

ನಿರ್ದೇಶಕರೇ ಹೇಳಿದಂತೆ ಇದೊಂದು 1980 ರ ದಶಕದ ಪತ್ತೆದಾರಿ ಕಥೆಯೊಳನ್ನೊಳಗೊಂಡ ಸಿನಿಮವಾಗಿದೆಯಂತೆ. ಈ ಸಿನಿಮಾದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹರಿಪ್ರಿಯಾ ನಾಯಕಿಯಾಗಿ ತೆರೆ ಮೇಲೆ ಮಿಂಚಲಿದ್ದಾರೆ. ಈ ಹಿಂದೆ ಹರಿಪ್ರಿಯಾ ರಿಷಬ್ ಶೆಟ್ಟಿ ನಿರ್ದೇಶನದ ರಿಕಿ ಸಿನಿಮಾದಲ್ಲಿ ನಟಿಸಿದ್ದರು. ಸಂತೋಷ್ ಕೆಸಿ ನಿರ್ಮಾಣದ ಬೆಲ್ ಬಾಟಂಗೆ ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ ಕಶ್ಯಪ್ ಕ್ಯಾಮೆರಾ ಹಿಡಿದಿದ್ದಾರೆ.

Facebook Auto Publish Powered By : XYZScripts.com