ನಾಗರಹಾವುಃ ವಿಷ್ಣು ದಾದಾ ಮೇಲಿನ ಅಭಿಮಾನವೇ ಶ್ರೀರಕ್ಷೆ

ಆರಂಭದಿಂದ್ಲೂ ತುಂಬಾ ಕುತೂಹಲ, ನಿರೀಕ್ಷೆಗಳನ್ನ ಹುಟ್ಟುಹಾಕಿದ್ದ ಸಿನಿಮಾ ನಾಗರಹಾವು. ಅದರಲ್ಲೂ ಮೂರು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಅಂದ್ರೆ ಪ್ರೇಕ್ಷಕರ ನಿರೀಕ್ಷೆಗಳು ದುಪ್ಪಟ್ಟಾಗ್ತಾವೆ. ಆದರೆ ಆ ಎಲ್ಲಾ ನಿರೀಕ್ಷೆಗಳಿಗೆ ನಾಗರಹಾವು ಎಳ್ಳುನೀರು ಬಿಟ್ಟಿದೆ. ಬೆಳ್ಳಿಪರದೆಗೆ ಗುಡ್ ಬೈ ಹೇಳಿದ್ದ ರಮ್ಯಾ ಈ ಚಿತ್ರದ ಮೂಲಕ ಮತ್ತೆ ರಂಗಪ್ರವೇಶ ಮಾಡಿರೋದು ವಿಶೇಷ.
ತುಂಬಾ ಗ್ಯಾಪ್‌ ಬಳಿಕ ರಮ್ಯಾ ಬಣ್ಣಹಚ್ಚಿರೋ ಚಿತ್ರ ಇದು. ಬಹುಶಃ ಏನೋ ಕಾಟಾಚಾರಕ್ಕೆ ಈ ಪಾತ್ರ ಮಾಡಿರ್ಬೋದು ಅಂತ ಎಷ್ಟೋ ಜನ ಅಂದ್ಕೊಂಡಿದ್ರು. ಆದರೆ ಸಿನಿಮಾ ನೋಡಿದ್ರೆ ಆ ರೀತಿ ಅನ್ನಿಸಲ್ಲ. ನಾಗಕನ್ಯೆ ಪಾತ್ರವನ್ನು ರಮ್ಯಾ ಆವಾಹಿಸಿಕೊಂಡು ಬಿಟ್ಟಿದ್ದಾರೆ. ಟೈಟಲ್ ಕಾರ್ಡ್‌ನಿಂದ ಹಿಡಿದು ಕ್ಲೈಮ್ಯಾಕ್ಸ್ ತನಕ ಅವರದ್ದೇ ಆಟ ನಾಗಲೋಟ.
ಸಿನಿಮಾದ ತುಂಬಾ ಆವರಿಸಿಕೊಂಡಿರೋ ರಮ್ಯಾ ನಿಮ್ಮನ್ನು ನಾಗರಹಾವಿನ ರೂಪದಲ್ಲಿ ಕಾಡದೆ ಬಿಡೋದಿಲ್ಲ. ಕಥೆ ಸಿಂಪಲ್ಲಾಗಿದ್ರೂ ಮೇಕಿಂಗ್‌ನಲ್ಲಿ ರಿಚ್‍ನೆಸ್ ಕಾಣ್ಬೋದು. ಅದರಲ್ಲೂ ಗ್ರಾಫಿಕ್ಸಲ್ಲಿ ಮೂಡಿಬಂದಿರೋ ಸಾಹಸಸಿಂಹ ಡಾ.ವಿಷ್ಣುವರ್ಧನ್ ಚಿತ್ರದ ಪ್ರಮುಖ ಆಕರ್ಷಣೆ.
ಬಹುಶಃ ಚಿತ್ರಕ್ಕೆ ಶ್ರೀರಕ್ಷೆ ಅಂದ್ರೆ ವಿಷ್ಣು ದಾದಾ ಅವರೇ. ನಿರ್ದೇಶಕ ಕೋಡಿ ರಾಮಕೃಷ್ಣ ಅವರಿಂದ ನೀವು ಹೆಚ್ಚಿಗೆ ನಿರೀಕ್ಷಿಸಿ ಹೋದರೆ ತಪ್ಪಾಗುತ್ತದೆ. ವಿಷ್ಣುವರ್ಧನ್ ಅವರನ್ನು ಮತ್ತೆ ಪ್ರೇಕ್ಷಕರ ಮುಂದೆ ತಂದಿರೋದಷ್ಟೇ ಅವರ ಹೆಗ್ಗಳಿಕೆ. ಗ್ರಾಫಿಕ್ಸ್‌ನಿಂದ ತುಂಬಿರೋ ಆವರೇಜ್ ಚಿತ್ರ ಇದು ಅನ್ನದೆ ವಿಧಿಯಿಲ್ಲ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com