ನವ ಸಾಧಕಿಯರಿಗೆ ’ಸುವರ್ಣ’ ಸನ್ಮಾನದ ಸಂಭ್ರಮ

ಕಿರುತೆರಯಲ್ಲೆ ಅದ್ಧೂರಿ ದಸರಾ ಸಂಭ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ಸನ್ಮಾನ ಹಾಗೆ ವೈಭವದ ದಸರಾ ಸಂಭ್ರಮದಲ್ಲಿ ಸ್ವಾರ್‍ಗಳ ರಂಗು ರಂಗಿನ ವೇದಿಕೆಯ ಸೊಬಗನ್ನು ನಾಡಿನ ಜನತೆಗೆ ವೀಕ್ಷಿಸಲು ಸ್ಟಾರ್ ಸುವರ್ಣ ಇದೇ ಅಕ್ಟೋಬರ್ 16 ಸಂಜೆ 6ಗಂಟೆಗೆ ಬಿತ್ತರಿಸಲು ಸಜ್ಜಾಗಿದೆ.
ದಸರಾ ಕರ್ನಾಟಕದ ಜನತೆಗೆ ವಿಜೃಂಭಣೆಯ ನಾಡ ಹಬ್ಬ. ಅಂತೆಯೇ ಸ್ಟಾರ್ ಸುವರ್ಣವೂ ಕೂಡಾ ಈ ಹಬ್ಬದ ಹಿನ್ನಲೆ “ಸುವರ್ಣ ಮಹೋತ್ಸವವನ್ನ” ಏರ್ಪಡಿಸಿತ್ತು. ದಸರೆಯ ನವರಾತ್ರಿ ನವದುರ್ಗೆಯರಿಗೆ ವಿಶೇಷವಾಗಿದೆ ಹಾಗೆ ಈ ಮಹೋತ್ಸವ ನವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನವ ಮಹಾನ್ ಮಹಿಳೆಯರಿಗೆ “ಮಹಿಳಾ ಸಾಧಕಿ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಐದು ದಶಕದಿಂದ ಸಿನಿಮಾ ಕ್ಷೇತ್ರದಲ್ಲಿ ನಟಿಸಿ, ಬಾಲ ನಟಿಯಾಗಿ, ನಟಿಯಾಗಿ ನಾಲ್ಕು ಭಾಷೆಗಳಲ್ಲಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಭಿನಯ ಸರಸ್ವತಿ, ಸಾಕಷ್ಟು ಪ್ರಶಸ್ತಿಗಳನ್ನು ಮಹಾನ್ ಪ್ರತಿಭೆ ಬಿ. ಸರೋಜ ದೇವಿ ಯವರಿಗೆ, ಕನ್ನಡವನ್ನು, ಕರ್ನಾಟಕವನ್ನು ಮತ್ತು ಭಾರತವನ್ನು ವಿಶ್ವದೆಲ್ಲೆಡೆ ಪ್ರತಿ ಬಿಂಬಿಸಿದ ಪ್ರತಿಭೆ, ಕ್ರೀಡಾಪಟು ಆಶ್ವಿನಿ ಪೋನ್ನಪ್ಪ ಇವರಿಗೆ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಕ್ಕೆ, ಸಾಲು ಸಾಲು ಮರಗಳನ್ನ ನೆಟ್ಟು, ಕನ್ನಡಿಗರ ಮನಸಲ್ಲಿ ಬೇರು ಬಿಟ್ಟು, ಇಂದಿಗೂ ಹಚ್ಚ ಹಸಿರಾಗಿರೋ, ಪರಿಸರದ
ಕಾಳಜಿಯನ್ನು ಹೊಂದಿರುವ ತಾಯಿ, ಕರುನಾಡಿನ ಹೆಮ್ಮೆಯ ಸಾಧಕಿ, 105 ವರ್ಷ ವಯಸ್ಸಿನ ಹಿರಿಯ ಚೇತನ ಸಾಲು ಮರದ ತಿಮ್ಮಕ್ಕ ಅವರಿಗೆ ಸಮಾಜ ಸೇವೆಯ ಕಾಳಜಿಗೆ,

ರಂಗಭೂಮಿ, ಬೆಳ್ಳಿತೆರೆ, ಕಿರಿತೆರೆಯಲ್ಲಿ ಹೆಸರುವಾಸಿಯಾಗುವುದಲ್ಲದೇ ರಾಜಕೀಯದ ಮೂಲಕ ನಾಡ ಜನತೆಯ ಸೇವೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ಮಂತ್ರಿ ಉಮಾಶ್ರೀ ಯವರಿಗೆ ಸಮಾಜ ಸೇವೆಗಾಗಿ, ಗೈನೋಕಾಲಾಜಿಸ್ಟ್ ನಲ್ಲಿ ಸುಮಾರು ವರ್ಷಗಳ ಸೇವೆ ಮಾಡಿ, ಎಷ್ಟೋ ಸಂಸಾರಿಕ ಜೀವನಕ್ಕೆ ದಾರಿ ದೀಪವಾಗಿ, ಜನತೆಗೆ ಆರೋಗ್ಯದ ಮಾರ್ಗದರ್ಶಕರಾದ ಡಾ. ಪದ್ಮಿನಿ ಪ್ರಸಾದ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ, ಕಳೆದ ಮೂರು ದಶಕಗಳಲ್ಲಿ 9 ಭಾಷೆಗಳಲ್ಲಿ 12,500 ಕ್ಕೂ ಹೆಚ್ಚು ಹಾಡುಗಳನ್ನು ಅವರ ಕಂಠಸಿರಿಯಿಂದ ಭಾರತದೆಲ್ಲಡೆ ಕರ್ನಾಟಕದ ಕಂಪನ್ನು ಹರಡಿದ ಗಾಯಕಿ ಮಂಜುಳ ಗುರುರಾಜ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ, ಪಂಚಭಾಷಾ ನಟಿ, 60 ರಿಂದ 80ರ ದಶಕದಲ್ಲಿ ಸ್ಯಾಂಡಲ್ ವುಡ್‍ನಿಂದ ಬಾಲಿವುಡ್ ವರೆಗೂ ಎಲ್ಲಾ ಸೂಪರ್ ಸ್ವಾರಗಳ ಜೊತೆ ಅಭಿನಯಿಸಿದ ಪ್ರತಿಭೆ ಭಾರತಿ ವಿಷ್ಣುವರ್ಧನ್ ಅವರಿಗೆ.
ಭಾರತದ ಎಲ್ಲ ನೃತ್ಯಗಳನ್ನು ಅರಿದು ಕುಡಿದು, ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಾ, ನಾಡಿನ ಜನೆತೆಗೆ ಚಿರಪರಿಚಿತರಾದ ಆಲ್ ರೌಂಡರ್ ಮಯೂರಿ ಊಪಾಧ್ಯ ಅವರ ನೃತ್ಯ ಸಾಧನೆಗಾಗಿ, ಬಾಲ ನಟಿಯಾಗಿ ಸಾಹಸ ಸಿಂಹದ ಜೊತೆ ಪರ್ವ ಹತ್ತಿದ ಪ್ರತಿಭೆ, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ನಾಯಕಿ ಪಡ್ಡೆ ಹುಡುಗರ ಮನಸಲ್ಲಿ ಐಶ್ವರ್ಯ ಅಂತಾನೇ ಇರೋ ಐಸು ಈ ಅಮೂಲ್ಯ ಹೀಗೆ 9 ಜನ ಮಹಿಳಾ ಸಾಧಕಿಯರಿಗೆ ಸ್ಟಾರ್ ಸುವರ್ಣ ವಾಹಿನಿ “ಸುವರ್ಣ ಮಹೋತ್ಸವ” ದಲ್ಲಿ “ಮಹಿಳಾ ಸಾಧಕಿ”ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಹಾಗೆ ಇದೇ ಸಂದರ್ಭದಲ್ಲಿ ಜನಪ್ರಿಯ ತಾರೆ ಹೇಮಾಚೌದ್ರಿಯವರಿಗೆ “ಸುವರ್ಣ ರತ್ನ”, ಅಮ್ಮ ಧಾರಾವಾಹಿಯ ಕೌಸಲ್ಯ, ದುರ್ಗದ ದಮಯಂತಿ, ಅವನ್ನು ಮತ್ತೆ ಶ್ರಾವಣಿಯ
ಜಯಕ್ಕಗೆ “ಫ್ರೈಡ್ ಆಫ್ ದಿ ಚಾನಲ್” ಪ್ರಶಸ್ತಿಯನ್ನು ನೀಡಲಾಯಿತು. ಒಟ್ಟಾರೆ ಮಹಿಳಾ ಪ್ರಧಾನವಾಗಿರುವ ಈ ಕಾರ್ಯಕ್ರಮ ಬಹು ರಂಗಿನಿಂದ ಕೂಡಿತ್ತು.
ಇನ್ನೂ ಈ ವೇದಿಕಯಲ್ಲಿ ಸ್ಟಾರ್‍ಗಳ ದರ್ಬಾರ ನಡೆಯಿತು. ಸೂಪರ್ ಸ್ವಾರ್ ಪ್ರಕಾಶ್ ರೈ, ಕಲಾ ಸಾಮ್ರಾಟ ಎಸ್ ನಾರಯಣ, ಮ್ಯೂಸಿಕ್ ಮಾಂತ್ರಿಕ ರಘುದೀಕ್ಷತ್, ಶುಭಾ ಪುಂಜಾ ಅವರ ಉಪಸ್ಥಿತಿ ಸುವರ್ಣ”ಮಹೋತ್ಸ”ವಕ್ಕೆ ಶೋಭೆ ತಂದಿತು. ಅಮ್ಯೂಲ ಡ್ಯಾನ್ಸ್, ಊಮಾಶ್ರೀ ಕಾಮಿಡಿ ಡೈಲಾಗ್ ನೋಡುಗರನ್ನ ನಕ್ಕು ನಲಿಸಿತು.
ಮಂಜಳ ಗುರುರಾಜ, ರಘುದೀಕ್ಷಿತ್ ಮತ್ತು ಮಯೂರಿ ಸಂಗೀತದ ವೈಭವವನ್ನು ಮೂಡಿಸಿದರು. ಕಲರ್ ಫುಲ್ “ಸುವರ್ಣ ಮಹೋತ್ಸವ” ಇದೇ ಭಾನುವಾರ (ಅಕ್ಟೋಬರ್ 16) ಸಂಜೆ 6ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com