ನಟ ಶರಣ್ ಗೆ ಕಾಡುತ್ತಿರುವ ‘ಮಾಜಿ ಡವ್’

ನಟ ಶರಣ್ ಗೆ ಈಗ ‘ಮಾಜಿ ಡವ್’ ಕಾಡುತ್ತಿದ್ದಾಳಂತೆ. ಹಾಗಂತ ಶರಣ್ ಗೆ ಹಳೆ ಲವರ್ ಇದ್ದಾರ ಅಂತ ಕನ್ಫ್ಯೂಸ್ ಆಗಬೇಡಿ. ಶರಣ್ ಗೆ ಈಗ ಕಾಡುತ್ತಿರುವುದು ‘ಮಾಜಿ ಡವ್’ ಎಂಬ ಒಂದು ಹಾಡು.

‘ಮಾಜಿ ಡವ್’ ಎಂಬ ಕನ್ನಡದ ಒಂದು ಹಾಡು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಈ ಹಾಡು ಈಗ ಎಲ್ಲರ ಮನ ಗೆಲ್ಲುತ್ತಿದೆ. ನಟ ಶರಣ್ ಕೂಡ ಈ ಹಾಡನ್ನು ಕೇಳಿ ಮೆಚ್ಚಿದ್ದಾರೆ.

ಅರ್ಜುನ್ ಜನ್ಯ ಬಳಗದ ಸೋನಿ ಆಚಾರ್ಯ ಈ ಹಾಡಿಗೆ ಸಂಗೀತ ನೀಡಿ, ಹಾಡಿ, ತಾವೇ ನಟನೆ ಮಾಡಿದ್ದಾರೆ. ಎಂ.ಚಂದ್ರಮೌಳಿ ಸಾಹಿತ್ಯ ಮತ್ತು ನಿರ್ದೇಶನ ಮಾಡಿದ್ದಾರೆ. ಗಂಗಾಧರಯ್ಯ ಈ ಹಾಡಿಗೆ ಬಂಡವಾಳ ಹಾಕಿದ್ದಾರೆ.

ಈ ಹಾಡು ಪ್ರೇಮಿಗಳ ದಿನದ ವಿಶೇಷವಾಗಿ ರಿಲೀಸ್ ಆಗಿತ್ತು. ಲವ್ ಫೇಲ್ ಆಗಿರುವ ಒಬ್ಬ ಹುಡುಗನ ಸಂಕಟವನ್ನು ಹಾಡಿನಲ್ಲಿ ಹೇಳಲಾಗಿದೆ. ಸೋನಿ ಆಚಾರ್ಯ ಮತ್ತು ಜಯಶ್ರೀ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಿ ಆಚಾರ್ಯ ಭಗ್ನ ಪ್ರೇಮಿಯಾಗಿ, ಜಯಶ್ರೀ ಮುದ್ದು ಮುದ್ದಾಗಿ ನಟಿಸಿದ್ದಾರೆ.

Facebook Auto Publish Powered By : XYZScripts.com