ನಟ ವಿಕ್ರಂ ಕಾರ್ತಿಕ್ ಮೇಲಿನ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್… ಇಲ್ಲಿ ಓದಿ

ಸ್ಯಾಂಡಲ್ವುಡ್ ನವನಟ ವಿಕ್ರಂ ಕಾರ್ತಿಕ್ ಮೇಲಿನ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಬಸವೇಶ್ವರ ನಗರದ ವಾಟರ್ ಟ್ಯಾಂಕ್ ಬಳಿ ಮಂಗಳವಾರ ರಾತ್ರಿ ವಿಕ್ರಂ ಕಾರ್ತಿಕ್ ಬರುತ್ತಿರುವಾಗ ಆರು ಜನರ ತಂಡ ತನ್ನ ಮೇಲೆ ಹಲ್ಲೆ ಮಾಡಿ ತಮ್ಮ ಬಳಿಸಿದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು ಎಂದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಇದೀಗ ಸತ್ಯಾಂಶ ಬೆಳಕಿಗೆ ಬಂದಿದ್ದು ನಟ ವಿಕ್ರಂ ಕುಡಿದ ಮತ್ತಿನಲ್ಲಿ ತಾನೇ ವೋಕ್ಸ್ ವ್ಯಾಗನ್ ಕಾರಿಗೆ ಗುದ್ದಿದ್ದಾರೆ. ನಂತರ ತನ್ನ ಬಳಿ ಇರುವ ಮೊಬೈಲ್, ಲ್ಯಾಪ್ ಟಾಪ್ ಮತ್ತು ಕಾರ್ ಕೀ ನೀಡಿ ನಾಳೆ ನಿಮ್ಮ ಕಾರನ್ನು ರಿಪೇರಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಬಂದು ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಯಾರೋ ಹಲ್ಲೆ ನಡೆಸಿದ್ದದಾರೆ ಎಂಬ ನಾಟಕವಾಡಿದ್ದಾರೆ.

ವಿಕ್ರಂ ಕಾರ್ತಿಕ್ ಆಪ್ತಮಿತ್ರರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲು ಚಿತ್ರಕ್ಕೆ ಆಪ್ತಮಿತ್ರ 2 ಎಂದು ಹೆಸರಿಡಲಾಗಿತ್ತು. ನಂತರ ಅದನ್ನು ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಎಂದು ಬದಲಿಸಲಾಗಿತ್ತು.

ಇದೀಗ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಸಿನಿಮಾ ಬಿಡುಗಡೆ ಕೆಲಸದಲ್ಲಿ ತೊಡಗಿದ್ದ ಕಾರ್ತಿಕ್ ಪಬ್ಲಿಸಿಟಿ ಸ್ಟಂಟ್ ಗಾಗಿ ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ.

Facebook Auto Publish Powered By : XYZScripts.com