ನಟ ಪುನೀತ್ ರಾಜ್ ಕುಮಾರ್ ಗೆ ತಮಿಳರಿಂದ ಅವಮಾನ!

ಸಿನಿಮಾ ಡೆಸ್ಕ್ : ಬಾಹುಬಲಿ ಬೆಂಕಿ ತಣ್ಣಗಾಗುವಷ್ಟರಲ್ಲೇ ತಮಿಳರು ಮತ್ತೊಂದು ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ತಮಿಳರು ಅವಮಾನ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಕುರಿತಾಗಿ ತಮಿಳರು ಲೇವಡಿ ಮಾಡಿದ್ದಾರೆ.

ಪುನೀತ್ ಒಬ್ಬ ನಟನಲ್ಲ ಆತ ಕಾಮಿಡಿಯನ್ ಎಂದು ತಮಿಳು ಸಿನಿಪ್ರಿಯರು ಟ್ವಿಟರ್ ನಲ್ಲಿ

ಹೀಯಾಳಿಸಿದ್ದಾರೆ.

ಬಾಹುಬಲಿ ಪಾತ್ರಧಾರಿ ಕಟ್ಟಪ್ಪ ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿ ವಿವಾದ ಹುಟ್ಟು ಹಾಕಿದ್ದರು. ಕಟ್ಟಪ್ಪ ಕ್ಷಮೆ ಕೇಳುವವರೆಗೂ ಬಾಹುಬಲಿ- 2 ಸಿನಿಮಾ ರಿಲೀಸ್ ಗೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕನ್ನಡಿಗರು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಪುನೀತ್ ಒಬ್ಬ ನಟನಲ್ಲ ಆತ ಕಾಮಿಡಿಯನ್ ಎಂದು ತಮಿಳರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಕನ್ನಡಿಗರೇ ಮೊದಲು ಸತ್ಯರಾಜ್ ರವರಂತಹ ಉತ್ತಮ ನಟರನ್ನು ಅನ್ವೇಷಣೆ ಮಾಡಿ ನಂತರ ಮಾತನಾಡಿ. ಪುನೀತ್ ಓರ್ವ ಕಾಮಿಡಿಯನ್ , ಅವರನ್ನು ಸೂಪರ್ ಸ್ಟಾರ್ ಮಾಡಿರುವವವರು ನೀವು’ ಎಂದು ತಮಿಳಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಬಾಹುಬಲಿ ಬೆಂಕಿ ತಣ್ಣಗಾಗುವಷ್ಟರಲ್ಲಿ ತಮಿಳರು ಮತ್ತೆ ಪುನೀತ್ ಗೆ ಅವಮಾನ ಮಾಡಿರುವುದು ಕನ್ನಡಿಗರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Courtesy: Kannada News Now

Facebook Auto Publish Powered By : XYZScripts.com