ನಟ ಪುನೀತ್ ಕಾರು ಅಪಘಾತ, ಅಪಾಯದಿಂದ ಪಾರು.

ಬಳ್ಳಾರಿಯಲ್ಲಿ ಪವನ್ ಒಡೆಯರ್ ನಿರ್ದೇಶನದ ‘ನಟ ಸಾರ್ವಭೌಮ’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ಅನಂತಪುರ ಬಳಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ರಾತ್ರಿ 9.30ರ ಸುಮಾರಿಗೆ ಈ ಅವಘಡ ನಡೆದಿದ್ದು ಅದೃಷ್ಟವಶಾತ್‌ ನಟ ಪುನೀತ್‌ ಸೇರಿ ಎಲ್ಲರೂ ಸೇಫ್ ಆಗಿದ್ದಾರೆ. ಘಟನೆ ಬಳಿಕ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ ಅಪ್ಪು ‘ಆರಾಮಾಗಿ ಇದ್ದೀನಿ ನಾಟ್‌ ಟು ವರಿ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಘಟನೆ ಬಳಿಕ ಅಪ್ಪು ಅವರು ಫೋನ್ ನಲ್ಲಿ ನಗುತ್ತಾ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

Facebook Auto Publish Powered By : XYZScripts.com