ನಟಿ ಮಾರಿಮುತ್ತು ಮೊಮ್ಮಗಳು ಚಿತ್ರರಂಗಕ್ಕೆ ಎಂಟ್ರಿ… ಹೇಗಿದ್ದಾಳೆ ಇಲ್ಲಿ ನೋಡಿ

‘ಉಪೇಂದ್ರ’ ಸಿನಿಮಾದ ಮಾರಿಮುತ್ತು ಪಾತ್ರವನ್ನು ಯಾರು ಮರೆಯುವುದಕ್ಕೆ ಆಗಲ್ಲ. ಆ ಪಾತ್ರದಲ್ಲಿ ನಟಿಸಿದ್ದ ಪೋಷಕ ನಟಿ ಸರೋಜಮ್ಮ ಅವರ ಮೊಮ್ಮಗಳು ನಟಿ ಜಯಶ್ರೀ ಆರಾಧ್ಯ ಈಗ ಸಿನಿಮಾ ಹೀರೋಯಿನ್ ಆಗಿದ್ದಾರೆ. ಕನ್ನಡದಲ್ಲಿ ಬರುತ್ತಿರುವ ‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಎಂಬ ಹೊಸ ಸಿನಿಮಾದಲ್ಲಿ ನಟಿ ಜಯಶ್ರೀ ಆರಾಧ್ಯ ನಟಿಸುತ್ತಿದ್ದಾರೆ. ಈ ಚಿತ್ರದ ಇಬ್ಬರು ನಾಯಕಿಯರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಜಯಶ್ರೀ ಆರಾಧ್ಯ ಹೇಳುವ ಹಾಗೆ ಅವರ ಅಜ್ಜಿ ನಟಿ ಸರೋಜಮ್ಮ ಅವರಿಗೆ ತಮ್ಮ ಕುಟುಂಬದ ಯಾರಾದರೂ ಒಬ್ಬರಾದರು ಚಿತ್ರರಂಗಕ್ಕೆ ಬರಬೇಕು ಎಂಬ ಆಸೆ ಇತ್ತಂತೆ ಅದನ್ನು ಮೊಮ್ಮಗಳಾಗಿ ಜಯಶ್ರೀ ಆರಾಧ್ಯ ಪೂರೈಸಿದ್ದಾರೆ.

Facebook Auto Publish Powered By : XYZScripts.com