ನಟಿ ಕಾಪ್ಸೆಗೆ ಅಶ್ಲೀಲ ಸಂದೇಶ ಕಳುಹಿಸಿದ ಯುವಕನಿಗೆ ಅವರು ಕೊಟ್ಟ ಉತ್ತರ ನೋಡಿ ಬೆಚ್ಚಿ ಬೀಳ್ತಿರಾ

ಸ್ಯಾಂಡಲ್ ವುಡ್ ನಟಿ ದೀಪ್ತಿ ಕಾಪ್ಸೆಗೆ ಯುವಕನೊಬ್ಬ ಅಶ್ಲೀಲವಾಗಿ ಮೆಸೇಜ್ ರವಾನಿಸಿದ್ದು, ಇದಕ್ಕೆ ಕಾಪ್ಸೆ ಕೊಟ್ಟ ಖಡಕ್ ಪ್ರತಿಕ್ರಿಯೆಗೆ ತಣ್ಣಗಾಗಿ ಹೋಗಿರುವ ಘಟನೆ ವರದಿಯಾಗಿದೆ.

ಅಪರಿಚಿತ ಯುವಕನೊಬ್ಬ ನಟಿ ದೀಪ್ತಿ ಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕು ಅಂತ ವಾಟ್ಸ್ ಅಪ್ ನಲ್ಲಿ ಮೆಸೇಜ್ ಮಾಡಿದ್ದ. ಇದಕ್ಕೆ ಆಕ್ರೋಶಗೊಂಡ ದೀಪ್ತಿ, ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ರಿಪ್ಲೈ ಮಾಡಿದ್ದರು.

ಅಷ್ಟೇ ಅಲ್ಲ ಸೆಕ್ಸ್ ವರ್ಕರ್ಸ್ ಬೇಕಾಗಿದ್ದರೆ ಎಂಬ ವಾಟ್ಸ್ ಅಪ್ ಸಂದೇಶಕ್ಕೆ, ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಎಂದು ಖಡಕ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದು, ಬಳಿಕ ಯುವಕ ಮೆತ್ತಗಾಗಿದ್ದ ಎಂದು ಮಾಧ್ಯಮದ ವರದಿ ತಿಳಿಸಿದೆ.

ದೀಪ್ತಿ ಕಾಪ್ಸೆ ಮಾಡೆಲಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ಜಗತ್ತಿನಿಂದ ಬಣ್ಣದ ಬದುಕಿಗೆ ಕಾಲಿಡುವ ಮೂಲಕ ನಟಿಯಾಗಿದ್ದರು. ಕಳೆದ ವರ್ಷದ ಅಂತ್ಯದಲ್ಲಿ ತಮ್ಮ ಬಾಲ್ಯದ ಬಹುಕಾಲದ ಗೆಳೆಯ ಅಜ್ಗರ್ ಜತೆ ವಿವಾಹವಾಗಿದ್ದರು.

ಜ್ವಲಂತಂ ದೀಪ್ತಿ ನಟನೆಯ ಮೊದಲ ಚಿತ್ರ, ಕಿರೀಟ, ಹನಿ,ಹನಿ ಇಬ್ಬನಿ, ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ” ಸಿನಿಮಾದಲ್ಲಿ ನಟಿಸಿದ್ದರು.

Facebook Auto Publish Powered By : XYZScripts.com