ನಟಿ ಅಮೂಲ್ಯ ಕಲ್ಯಾಣ : ‘ಮದುವೆಯ ಮಮತೆಯ ಕರೆಯೊಲೆ’ಯ ಆಕರ್ಷಣೆ

ಚಿತ್ರ ನಟಿ ಅಮೂಲ್ಯ ಮದುವೆಯಾಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ ಇದೀಗ ಮದುವೆಯ ಸಂಭ್ರಮದಲ್ಲಿದೆ.

ಜಗದೀಶ್-ಅಮೂಲ್ಯ ವಿವಾಹ ಮೇ 12ರಂದು ನೆರವೇರಲಿದ್ದು, ಈಗಾಗಲೇ ಆಹ್ವಾನ ಪತ್ರಿಕೆ ಕೂಡ ಪ್ರಿಂಟ್ ಆಗಿದೆಯಂತೆ. ಬುಕ್ ಲೆಟ್ ರೀತಿಯಲ್ಲಿ ಆಹ್ವಾನ ಪತ್ರಿಕೆ ಸಿದ್ದವಾಗಿದ್ದು, ಆದಿ ಚುಂಚನಗಿರಿಯಲ್ಲಿ ವಿವಾಹ ಕಾರ್ಯಕ್ರಮ ನೆರವೇರಲಿದೆ.

ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿದಿಯ್ದಲ್ಲಿ ಅಮೂಲ್ಯ ಮತ್ತು ಜಗದೀಶ್ ವಿವಾಹ ಮಹೋತ್ಸವ ನೆರವೇರಿದ ಬಳಿಕ, ಮೇ 16ರಂದು ಕನಕಪುರ ರಸ್ತೆಯಲ್ಲಿರುವ ಶ್ರೀ ಕನ್ ವೆನ್ ಷನ್ ಸೆಂಟರ್ ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.

ರಾಜರಾಜೇಶ್ವರಿ ನಗರದಲ್ಲಿರುವ ಸಂತೃಪ್ತಿ ಹೊಟೇಲ್ ನಲ್ಲಿ ಬೀಗರ ಊಟ ನಡೆಯಲಿದೆಯಂತೆ. ಇಷ್ಟೆಲ್ಲಾ ಡಿಟೈಲ್ಸ್ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದ್ದು, ವಿವಾಹ ಕಾರ್ಯಕ್ರಮದ ಸಿದ್ದತೆಗಳು ಭರದಿಂದ ಸಾಗಿದೆಯಂತೆ.

ವಧು-ವರರು ಕೂಡ ಭಾರಿ ಜೋಷ್ ನಲ್ಲಿದ್ದು, ನವಜೀವನದ ಕನಸು ಕಾಣುತ್ತಾ ಮದುವೆಯ ಸಿದ್ದತೆಯಲ್ಲಿ ತೊಡಗಿದ್ದಾರೆ.

Courtesy: Balkani News

Facebook Auto Publish Powered By : XYZScripts.com