‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸ್ಟಾರ್ ಗಳ ಪಟ್ಟಿ.. ಇಲ್ಲಿದೆ ನೋಡಿ

ಸ್ಟಾರ್ ಸುವರ್ಣ ವಾಹಿನಿ ಮತ್ತು ವಿಯು (viu) ಅಪ್ ನಲ್ಲಿ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ ‘ನಂ 1 ಯಾರಿ ವಿತ್ ಶಿವಣ್ಣ’ದ ಮೊದಲ ಸಂಚಿಕೆ ಮುಗಿದಿದೆ. ಉಪೇಂದ್ರ ಮತ್ತು ಗುರುಕಿರಣ್ ಮೊದಲ ಸಂಚಿಕೆಗೆ ಬಂದಿದ್ದು, ಮೊದಲ ಎಪಿಸೋಡ್ ಸಿಕ್ಕಾಪಟ್ಟೆ ಮಜಾವಾಗಿತ್ತು. ಅದರ ಜೊತೆಗೆ ಈ ಕಾರ್ಯಕ್ರಮದ ಮುಂದಿನ ಸಂಚಿಕೆಗೆ ಯಾವ ಯಾವ ಸ್ಟಾರ್ ಗಳು ಬರುತ್ತಾರೆ ಎನ್ನುವ ಕುತೂಹಲ ಕೂಡ ಇದೆ.

ಮೊದಲ ಸಂಚಿಕೆ

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮ ಕಳೆದ ಭಾನುವಾರದಿಂದ ಶುರುವಾಗಿದೆ. ಉಪೇಂದ್ರ ಮತ್ತು ಗುರುಕಿರಣ್ ಈ ಕಾರ್ಯಕ್ರಮ ಮೊದಲ ಸಂಚಿಕೆಯಲ್ಲಿ ಭಾಗಿಯಾಗಿದ್ದರು. ವಿಶೇಷ ಅಂದರೆ ಶಿವಣ್ಣ ಒತ್ತಾಯ ಮಾಡಿ ಉಪೇಂದ್ರ ಅವರೇ ಮೊದಲ ಸಂಚಿಕೆಗೆ ಬೇಕು ಅಂತ ಹೇಳಿ ಕರೆಸಿಕೊಂಡಿದ್ದರಂತೆ.

ಎರಡನೇ ಸಂಚಿಕೆ

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಎರಡನೇ ಸಂಚಿಕೆಗೆ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಆಗಮಿಸಿದ್ದಾರೆ.

ಮೂರನೇ ಸಂಚಿಕೆ

ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ ‘ಮಫ್ತಿ’ ಚಿತ್ರದ ಜೋಡಿ ನಟ ಶ್ರೀ ಮುರಳಿ ಮತ್ತು ನಿರ್ದೇಶಕ ನರ್ತನ್ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಮೂರನೇ ಸಂಚಿಕೆಯಲ್ಲಿ ಇರುತ್ತಾರೆ.

ನಾಲ್ಕನೇ ಸಂಚಿಕೆ

ಅಪ್ಪಟ್ಟ ಗೆಳತಿರಾದ ನಟಿ ಶೃತಿ ಹರಿಹರನ್ ಮತ್ತು ಶ್ರದ್ಧಾ ಶ್ರೀನಾಥ್ ‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ನಾಲ್ಕನೇ ಸಂಚಿಕೆಯಲ್ಲಿ ಭಾಗಿಯಾಗಲಿದ್ದಾರೆ.

ಇದರ ನಂತರದ ವಾರಗಳಲ್ಲಿ ಯಾರು ಬರಬೇಕು ಎನ್ನುವ ಪ್ರಶ್ನೆಗೆ ವೀಕ್ಷಕರು ಈ ಕೆಳಗಿನ ನಟರನ್ನು ಸೂಚಿಸಿದ್ದಾರೆ.

ದರ್ಶನ್ 39 %

ಸುದೀಪ್ 28 %

ಪುನೀತ್ ರಾಜ್ ಕುಮಾರ್ 20 %

ಯಶ್ 10%

 

Facebook Auto Publish Powered By : XYZScripts.com