ನಂಗೂ ಭಾವನೆಗಳಿವೆ ಅಂದ ಪ್ರಥಮ್!

ಬಿಗ್‍ಬಾಸ್ ಮನೇಲಿ ಪ್ರತೀ ದಿನ ಪ್ರತೀ ಕ್ಷಣವೂ ಒಂದಲ್ಲಾ ಒಂದು ಕುತೂಹಲಗಳು ಸಂಭವಿಸ್ತಾನೇ ಇರುತ್ತೆ. ಅಲ್ಲಿರೋದು ಬೆರಳೆಣಿಕೆಯಷ್ಟೇ ಜನ ಆದ್ರೂ ಅಲ್ಲಿ ಜಗತ್ತಿನ ಅಷ್ಟೂ ರಾಜಕೀಯ ನಡೆಯುತ್ತೆ. ಇದ್ದಕ್ಕಿದ್ದಂತೆ ಕೂಡಿಕೊಳ್ಳೋ ಸಂಬಂಧ, ಅದರ ಬೆನ್ನಿಗೇ ಕಾಣಿಸಿಕೊಳ್ಳುವ ಬಿರುಕು, ಸುಳ್ಳ್‍ಸುಳ್ಳೇ ದುಃಖ, ಧಾರಾಕಾರ ಕಣ್ಣೀರು… ಪ್ರೇಕ್ಷಕರನ್ನ ಹಿಡಿದಿಡೋಕೆ ಇಷ್ಟು ಸಾಕು!
ಹೀಗೆ ಪ್ರತೀ ವಾರದ ಸೀನುಗಳೂ ಪ್ರತೀ ಶನಿವಾರ ಮತ್ತೆ ಭಾನುವಾರ ಕಿಚ್ಚಾ ಸುದೀಪ್ ಅವ್ರ ಮುಂದೆ ರಿವೀಲ್ ಆಗತ್ತೆ. ಆಗಂತೂ ಥರ ಥರದ ಮ್ಯಾಟರ್ರು, ಸಮಜಾಯಿಷಿಗಳ ಹೊಳೇನೇ ಹರಿಯತ್ತೆ. ಆದ್ರೆ ಆ ಎಲ್ಲಾ ದಿನಗಳಲ್ಲೂ ಈ ಪ್ರಥಮ್‍ನ ಹಾಜರಿ ಇದ್ದೇ ಇರತ್ತೆ.
ಹುಚ್ಚಾ ವೆಂಕಟನ ಸ್ಥಾನವನ್ನ ಈಗಾಲ್ಲೇ ತುಂಬಿದಾನೆ. ಕಳೆದ ವಾರವಂತೂ ಸಾಕ್ಷಾತ್ತು ಹುಚ್ಚಾ ವೆಂಕಟನಿಂದಲೇ ಸಮಾ ಒದೆ ತಿಂದದ್ದೂ ಆಗಿದೆ. ಸಾಮಾನ್ಯವಾಗಿ ಯಾವ್ದೇ ಭಾವನೆಗಳಿಲ್ದೇ ಇರೋವ್ನಂತೆ ಬಿಹೇವ್ ಮಾಡೋ ಪ್ರಥಮ್ ಈ ಸಲ ಸುದೀಪ್ ಎದ್ರು ತನ್ನ ತುಮುಲಗಳ್ನ್ನ ತೋಡ್ಕೊಂಡಿದಾನೆ. ಕಾರಣವೇ ಇಲ್ದೇ ನಿರಂಜನ್ ದೇಶಪಾಂಡೆ ತನ್ನನ್ನು ನಾಮಿನೇಟ್ ಮಾಡಿದ ಬಗ್ಗೇನೂ ತುಂಬಾ ಸೆಂಟಿಮೆಂಟ್ ಅಲ್ಲಿ ಮಾತಾಡಿದಾನೆ. ವಿಶೇಷ ಅಂದ್ರೆ ತನಗೂ ಭಾವನೆಗಳಿವೆ ಅಂದಿದಾನೆ ಪ್ರಥಮ್!
ಕಳೆದ ವಾರಾನೇ ಮನೆ ಮಂದಿಗೆ ಪತ್ರ ಬರೆಯೋ ಟಾಸ್ಕಿನಲ್ಲಿ ಈ ಪ್ರಥಮ್ ತನ್ನ ಅಪ್ಪಂಗೆ ಪತ್ರ ಬರೆದಿದ್ದ. ಈತ ತನ್ನ ಮನೆಯವ್ರಿಂದ ಮತ್ತು ಅಪ್ಪನಿಂದ ದೂರಾಗಿ ಹತ್ತು ವರ್ಷ ಕಳ್ದಿವೆ. ಇವ್ನ ಹುಚ್ಚಾಟ ತಾಳಲಾರ್ದೇ ಎಲ್ರೂ ಇವ್ನನ್ನ ದೂರ ಇಟ್ಟಿದಾರೆ. ಇದೀಗ ಬಿಗ್‍ಬಾಸ್ ಮನೇಲಿರೋ ಪ್ರಥಮ್‍ಗೆ ಸಂಬಂಧಗಳ ಬೆಲೆ ಗೊತ್ತಾದಂತಿದೆ. ಯಾಕಂದ್ರೆ ಆತ ಹೊಸಾ ಮನುಷ್ಯನಾಗಿ ಎಲ್ರ ಮುಂದೆ ಬರೋದಾಗಿ ಹೇಳಿದಾನೆ.
ಕಳೆದ ಸೀಸನ್ ಅಲ್ಲಿದ್ದ ಹುಚ್ಚಾ ವೆಂಕಟನ ಬದಲಿಗೆ ಬಂದಂತಿದ್ದ ಪ್ರಥಮ್ ಇನ್ನೂ ಹುಚ್ಚನಾಗಿಯೇ ಬಿಗ್‍ಬಾಸ್ ಮನೆಯಿಂದ ಹೊರಗ್ ಬರ್ತಾನೆ ಅಂತಲೇ ಎಲ್ರೂ ಅಂದ್ಕೊಂಡಿದ್ರು. ಆದ್ರೆ ಆತ ಮನುಷ್ಯ ಆಗ್ತಿರೋವಂತಿದೆ!
Courtesy: Balkani News

Facebook Auto Publish Powered By : XYZScripts.com