ಧ್ವಜ ಚಿತ್ರಕ್ಕೂ ಗಾಂಧಿನಗರದ ‘ಪದ್ಮಾವತಿ ರಮ್ಯಾಗೂ ಏನು ಸಂಭಂದ?.. ಇಲ್ಲಿ ಓದಿ

‘ಸ್ಯಾಂಡಲ್ ವುಡ್ ಕ್ವೀನ್’ ಆಗಿ, ಗಾಂಧಿನಗರದ ‘ಪದ್ಮಾವತಿ’ ಆಗಿ ಮೆರೆದ ನಟಿ ಕಮ್ ರಾಜಕಾರಣಿ ರಮ್ಯಾ ಜೀವನಚರಿತ್ರೆ ಆಧಾರಿತ ಸಿನಿಮಾ ಸೆಟ್ಟೇರಲಿದೆ ಎಂಬ ಸುದ್ದಿ ಕೆಲವೇ ಕೆಲವು ದಿನಗಳ ಹಿಂದೆ ಚಂದನವನದಲ್ಲಿ ಹರಿದಾಡಿತ್ತು.

ಈಗ ನೋಡಿದ್ರೆ, ರಮ್ಯಾ ಅವರ ಲೈಫ್ ಸ್ಟೋರಿ ಆಧರಿಸಿಯೇ ‘ಧ್ವಜ’ ಸಿನಿಮಾ ತಯಾರಾಗಿದೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

ಹೇಳಿ ಕೇಳಿ ‘ಧ್ವಜ’ ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ. ಚಿತ್ರದಲ್ಲಿ ನಾಯಕಿ ಪ್ರಿಯಾಮಣಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇದು ರಮ್ಯಾ ಜೀವನಕ್ಕೆ ಸಂಬಂಧಿಸಿದ ಸಿನಿಮಾ ಇರಬಹುದಾ ಎಂಬ ಗುಮಾನಿ ಮೂಡಿದೆ.

‘ಧ್ವಜ’ ಚಿತ್ರದಲ್ಲಿ ರಾಜಕಾರಣಿ ಆಗಿ ಅಭಿನಯಿಸುತ್ತಿರುವ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ ಅಂತ. ಹೀಗಾಗಿ, ‘ಧ್ವಜ’ ಸಿನಿಮಾ ರಮ್ಯಾ ಜೀವನಾಧಾರಿತ ಚಿತ್ರ ಎಂದು ಎಲ್ಲೆಡೆ ಸುದ್ದಿ ಆಗುತ್ತಿದೆ. ‘ಧ್ವಜ’ ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾ ಆಗಿದ್ದರೂ, ರಮ್ಯಾ ಗೂ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಈ ಚಿತ್ರಕ್ಕೆ ರಮ್ಯಾ ಸ್ಫೂರ್ತಿ ಅಲ್ಲ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ.

Facebook Auto Publish Powered By : XYZScripts.com