ಧೋನಿಯ ಲವ್ವಿಡವ್ವಿ ರಹಸ್ಯ ಬಿಚ್ಚಿಟ್ಟ ನಟಿ ಲಕ್ಷ್ಮಿ ರಾಯ್

ಇಂಡಿಯನ್ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ, ಕನ್ನಡದ ಕುವರ ಲಕ್ಷ್ಮಿ ರಾಯ್ ನಡುವೆ ಏನೆಲ್ಲಾ ನಡೆದಿತ್ತು. ಇದೀಗ ಯಾವುದೇ ಮೀಡಿಯಾದಲ್ಲಿ ನೋಡುದ್ರು ಇದೇ ಹಾಟ್ ಟಾಪಿಕ್. ಹೌದು ಧೋನಿ ಜೀವನಗಾಥೆಯನ್ನ ಆಧಾರಿಸಿದ ಚಿತ್ರ ಎಂ ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಸದ್ಯದಲ್ಲೇ ತೆರೆಗೆ ಬರ್ತಿದೆ. ಹಾಗಾಗಿ ಈ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಅನ್ನೋ ಕುತೂಹಲ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ಹಾಗು ಸಿನಿಪ್ರಿಯರನ್ನ ಕಾಡ್ತಿದೆ.
ಇದ್ರಿಂದ ಧೋನಿಯ ಲೈಫ್ ಸ್ಟೋರಿಯಲ್ಲಿ ಲಕ್ಷ್ಮಿ ರಾಯ್ ಜೊತೆ ಡೇಟಿಂಗ್ ಬಗ್ಗೆ ಇರುತ್ತಾ ಅನ್ನೋ ಚರ್ಚೆ ಈಗ ಎಲ್ಲೇಲ್ಲೂ ಸೆನ್ಷೇಷನ್ ಆಗಿದೆ. ಹೌದು ಚೆನ್ನೈ ಸೂಪರ್ ಕಿಂಗ್ಸ್ ನ ಐಪಿಯಲ್ ಟೀಮ್ ಗೆ ಧೋನಿ ನಾಯಕನಾಗಿದ್ದಾಗ, ಲಕ್ಷ್ಮೀ ರಾಯ್ ಆ ಟೀಮ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ರು. ಆಗ ಇಬ್ರ ನಡುವೆ ಖುಲ್ಲಾಮ್ ಖುಲ್ಲಾ ಏನೆಲ್ಲಾ ಆಗ್ಬೇಕೊ ಅದೆಲ್ಲವೂ ನಡಿದಿದ್ದು, ಇವಿರಿಬ್ರು ಡೇಟಿಂಗ್ ಜೋರಾಗಿತ್ತು.
ಹಾಗಾಗಿ ಸಿನಿಮಾದಲ್ಲಿ ಧೋನಿ ಮಾಜಿ ಗರ್ಲ್ ಫ್ರೆಂಡ್ ಪ್ರಿಯಾಂಕ ಬಗ್ಗೆ ಟ್ರೇಲರ್ ನಲ್ಲಿ ತೋರಿಸಿದ್ದಾರೆ. ಹೀಗಾಗಿ ಲಕ್ಷ್ಮೀ ರಾಯ್ ಬಗ್ಗೆ ಕೂಡ ಇರಲಿದೆಯ ಅನ್ನೋದನ್ನ ಖುದ್ದು ಲಕ್ಷ್ಮೀ ರಾಯ್ ಅವ್ರಿಗೆ ಕೇಳಿದ್ದಾರೆ. ಈ ಪ್ರಶ್ನೆಯಿಂದ ಗರಮ್ ಆದ ಲಕ್ಷ್ಮೀ ರಾಯ್, ನನ್ನ ಮತ್ತೆ ಧೋನಿಯ ಮಧ್ಯೆ ರಿಲೇಷನ್ ಶಿಪ್ ಇದ್ದಿದ್ದು ನಿಜ. ಆದ್ರೆ ಮದ್ವೆ ಆಗ್ಬೇಕು ಅನ್ನೋ ಆಲೋಚನೆ ನಮ್ಮಿಬ್ರಲ್ಲಿ ಇರ್ಲಿಲ್ಲ. ಒಂದು ವರ್ಷ ಡೇಟಿಂಗ್ ಮಾಡಿದ್ವಿ. ನಂತ್ರ ನಮ್ಮಿಬ್ರ ಅಭಿಪ್ರಾಯಗಳು ಬೇರೆ ಬೇರೆ ಆದಕಾರಣ ನಾವು ಬೇರೆ ಆದ್ವಿ.
ಇದು 8 ವರ್ಷದ ಹಿಂದೆ ನಡೆದ ಕಥೆ, ಈಗಾಗ್ಲೇ ಧೋನಿಗೆ ಮದುವೆ ಆಗಿ ಮಗಳು ಕೂಡ ಇದ್ದು ಸುಂದರವಾದ ಸಂಸಾರವನ್ನ ನಡೆಸ್ತಿದ್ದಾರೆ. ನನ್ನ ಜೀವನದಲ್ಲಿ ಧೋನಿ ಚಾಪ್ಟರ್ ಕ್ಲೋಸ್ ಆಗಿದೆ. ಆದ್ರೆ, ಧೋನಿ ಜೊತೆ ನಾನೊಬ್ಬಳೆ ಏನು ಡೇಟಿಂಗ್ ಮಾಡಿಲ್ಲ, ತುಂಬಾ ಹುಡ್ಗಿಯರ ಜೊತೆ ಧೋನಿ ಲವ್ವಿ ಡವ್ವಿ ಆಡಿದ್ದಾರೆ ಅಂತ ಧೋನಿ ಜಾತಕವನ್ನ ಬಿಚ್ಚಿಟ್ಟಿದ್ದಾಳೆ. ಇನ್ಮುಂದೆ ಧೋನಿ ಬಗ್ಗೆ ನೋ ಕಾಮೆಂಟ್ಸ್ ಎಂದು ಹೇಳಿ, ತಣ್ಣಗೆ ಬಿಸಿ ಏರಿಸಿದ್ದಾಳೆ ರೈ ಲಕ್ಷ್ಮಿ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com