ಧೂದ್‌ಪೇಡ ದಿಗಂತ್‌ಗೆ ’ನಾಗರಹಾವು’ ಕಾಟ

ಭಾರಿ ಬಜೆಟಲ್ಲಿ ನಿರ್ಮಿಸುತ್ತಿರೋ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಚಿತ್ರ ’ನಾಗರಹಾವು’. ಈ ಚಿತ್ರದ ಟ್ರೇಲರ್ ಈಗಾಗ್ಲೆ ಯೂಟ್ಯೂಬಲ್ಲಿ ಸೈಕಲ್ ಟ್ಯೂಬ್‍ಗಿಂತ್ಲೂ ಜೋರಾಗಿ ಓಡ್ತಾ ಇದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗ್ತಿರೋ ಚಿತ್ರ ಇದು. ಈ ಚಿತ್ರದ ಹೀರೋ ದಿಗಂತ್ ಅನ್ನೋದೆ ಎಷ್ಟೋ ಮಂದಿಗೆ ಗೊತ್ತಿಲ್ಲ.
ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲೂ ದಿಗಂತ್ ಸುಳಿವಿಲ್ಲ. ರಮ್ಯಾ ಮತ್ತು ಗ್ರಾಫಿಕ್ಸ್ ನಾಗರಹಾವಿನದ್ದೇ ಸದ್ದು. ಈ ಬಗ್ಗೆ ದಿಗಂತ್‌ಗೆ ಸ್ವಲ್ಪ ಬೇಸರವೂ ಇದೆಯಂತೆ. ಅದಕ್ಕಿಂತ ಮುಖ್ಯವಾಗಿ ನನಗೆ ಇನ್ನೂ ಬಾಕಿ ಹಣ ಕೊಟ್ಟಿಲ್ಲ ಅಂತ ದಿಗಂತ್ ಹೇಳಿಕೊಂಡಿದ್ದಾರೆ.
ಆದರೆ ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಹೇಳೋದೆ ಬೇರೆ. ದಿಗಂತ್‌ಗೆ ಡಿಸೆಂಬರ್‌‍ನಲ್ಲೇ ಎಲ್ಲಾ ಪೇಮೆಂಟ್ ಸೆಟ್ಲ್ ಮಾಡಿದ್ದೀವಿ. ಬೇಕಿದ್ರೆ ನೋಡಿ ನನ್ನ ಮೊಬೈಲ್ ಮೆಸೇಜ್ ಅಂತ ತೋರಿಸ್ತಾರೆ. ಅವರಿಗೆ ಹಣ ಸಂದಾಯ ಆಗಿರೋ ಡೀಟೇಲ್ಸ್ ಬೇಕಿದ್ರೂ ಕೊಡ್ತೀನಿ ಅಂತಾರೆ.
ಇನ್ನೊಂದು ಮೂಲದ ಪ್ರಕಾರ, ದಿಗಂತ್ ಕ್ಯಾರಿಯರ್ ನಲ್ಲೇ ನಾಗರಹಾವು ಚಿತ್ರಕ್ಕೆ ಕೊಟ್ಟಿರೋ ಬಿಗ್ ಅಮೌಂಟ್ ಇದು ಅಂತಿದ್ದಾರೆ. 35 ಕೋಟಿ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡ್ತಿದ್ದಾರೆ. ಆಡಿಯೋ ಲಾಂಚ್‌ಗೆ 25 ಲಕ್ಷ ಖರ್ಚು ಮಾಡಿದ್ರು, ಕಾವೇರಿ ಗಲಾಟೇಲಿ ಸತ್ತರೋರಿಗೆ 2 ಲಕ್ಷ ಚೆಕ್ ಕೊಟ್ಟಿದೆ ಚಿತ್ರತಂಡ. ಇಷ್ಟೆಲ್ಲಾ ಮಾಡಿರೋ ಚಿತ್ರತಂಡಕ್ಕೆ ದಿಗಂತ್ ಪೇಮೆಂಟ್ ಕೊಡೋದು ಒಂದ್ ಲೆಕ್ಕಾನಾ ಅಂತಿದೆ ಗಾಂಧಿನಗರ. ಆದ್ರೆ ದಿಗಂತ್ ಮಾತ್ರ ಇನ್ನೂ ಫುಲ್ ಅಮೌಂಟ್ ಸೆಟ್ಲ್ ಮಾಡಿಲ್ಲ ಅಂತಿದ್ದಾರೆ. ಅದೇನು ಕಥೆನೋ ಏನೋ ಗೊತ್ತಿಲ್ಲ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com