ದೊಡ್ಮನೆ ಕುಟುಂಬದಿಂದ ಶೀಪ್ರವೇ ಬೆಳ್ಳಿತೆರೆಗೆ ಮತ್ತೋರ್ವ ಹೀರೋ ಎಂಟ್ರಿ

 

ರಾಮ್ ಕುಮಾರ್ ಮತ್ತು ಪೂರ್ಣಿಮಾ ರಾಜ್ ಕುಮಾರ್ ಮಗನಾದ ಧೀರೆನ್ ಕುಮಾರ್ ರನ್ನು ಚಿತ್ರಕ್ಕೆ ಹಾಕಿಕೊಳ್ಳಲು ಕೆಲವು ನಿರ್ಮಾಪಕರು ಮುಂದೆ ಬಂದಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿಬರುತ್ತಿದೆ.

ಈಗಾಗಲೇ ಸಾಕಷ್ಟು ನಿರ್ಮಾಪಕರುಗಳು ಧೀರೇನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಕನ್ನಡ ಸಿನಿಮಾರಂಗದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಕಂಬೈನ್ಸ್ ಧೀರೇನ್ ಸಿನಿಮಾವನ್ನ ನಿರ್ಮಾಣ ಮಾಡುವ ಸಾಧ್ಯತೆಗಳಿವೆ ಎನ್ನುವ ಸುದ್ದಿ ಹರಿದಾಡಿತ್ತು.

ಸ್ಟೈಲಿಷ್ ಆಗಿ ಫೋಟೋ ಶೂಟ್ ಮಾಡಿಸಿದ್ದ ಧೀರೇನ್ ರಾಮ್ ಕುಮಾರ್ ಇದೇ ವರ್ಷ ಬೆಳ್ಳಿ ಪರದೆಯ ಮೇಲೆ ಬರಲಿದ್ದಾರೆ.  ಒಳ್ಳೆ ಕಥೆ ಹಾಗೂ ನಿರ್ದೇಶಕರಿಗಾಗಿ ಹುಡುಕಾಟ ಶುರುವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಧೀರೇನ್. ಧೀರೇನ್ ಕೂಡ ಚಿತ್ರದಲ್ಲಿ ನಾಯಕನಾಗಲು ಬೇಕಾಗಿರುವ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಲುಕ್ ಟೆಸ್ಟ್ ಗಾಗಿ ಫೋಟೋ ಶೂಟ್ ಮಾಡಿಸಿದ್ದು ಈಗಾಗಲೇ ಕನ್ನಡ ಚಿತ್ರರಂಗದ ರಣವೀರ್ ಸಿಂಗ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 

 

Facebook Auto Publish Powered By : XYZScripts.com