ದೊಡ್ಮನೆಯಿಂದ ಸಿನಿಮಾರಂಗಕ್ಕೆ ಹೇಳಿ ಮಾಡಿಸಿದ ಮಾಸ್ ಲುಕ್ ಆರಡಿ ಕಟೌಟ್ ಎಂಟ್ರಿ, ಯಾರದು? ಇಲ್ಲಿ ಓದಿ

ಡಾ ರಾಜ್ ಕುಮಾರ್ ಫ್ಯಾಮಿಲಿಯಿಂದ ಹೊಸ ನಾಯಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್ ಎ ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ ಹೀರೋ ಆಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಸೂರಜ್ ಕುಮಾರ್ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಚಿತ್ರರಂಗಕ್ಕೆ ಬರುವ ತಯಾರಿಯನ್ನ ಮಾಡಿಕೊಂಡಿದ್ದಾರೆ. ನಿನಾಸಂ ನಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿದ್ದು ಚೆನೈ ನಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ಟ್ರೈನಿಂಗ್ ಪಡೆದುಕೊಂಡಿದ್ದಾರೆ. ದರ್ಶನ್ ಅಭಿನಯದ ಐರಾವತ ಹಾಗೂ ತಾರಕ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಫೋಟೋ ಶೂಟ್ ಮಾಡಿಸಿದ್ದಾರೆ.

Facebook Auto Publish Powered By : XYZScripts.com