ದುನಿಯಾ ವಿಜಯ್ ಈಗ ಜಾನಿ ಜಾನಿ ಎಸ್ ಪಪ್ಪ!

ದುನಿಯಾ ವಿಜಯ್, ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಆರು ವರ್ಷಗಳ ಹಿಂದೆ ಜಾನಿ ಮೇರಾನಾಮ್ ಪ್ರೀತಿ ಮೇರಾ ಕಾಮ್ ಸಿನಿಮಾದಲ್ಲಿ ನಟಿಸಿದ್ದರು, ಇದೀಗ ದುನಿಯಾ ವಿಜಯ್ ಜೊತೆ ಮತ್ತೆ ಪ್ರೀತಂಗುಬ್ಬಿ ಚಿತ್ರವೊಂದನ್ನು ಮಾಡುತ್ತಿದ್ದಾರೆ.

ಹೌದು, ಆರು ವರ್ಷಗಳ ನಂತರ ಈ ಜೋಡಿ ಒಂದಾಗಿದ್ದು, ಜಾನಿ ಜಾನಿ ಎಸ್ ಪಪ್ಪ ಎಂಬ ಹೊಸ ಚಿತ್ರವನ್ನು ಮಾಡುತ್ತಿದ್ದಾರೆ. ಜಾನಿ ಮೇರಾ ನಾಮ್ ಸಿನಿಮಾದಲ್ಲಿ ರಂಗಾಯಣ ರಘು, ಮತ್ತು ದುನಿಯಾವಿಜಯ್ ಜೋಡಿ ಮಿಂಚಿತ್ತು, ಅದು ಈ ಸಿನಿಮಾದಲ್ಲೂ ಮುಂದುವರಿಯುತ್ತದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದಾರೆ.

ಜಾನಿ ಸಿನಿಮಾದಲ್ಲಿ ನಟಿಸಿದ್ದ ಎಲ್ಲ ಕಲಾವಿದರು ಜಾನಿ ಜಾನಿ ಎಸ್ ಪಪ್ಪ ಸಿನಿಮಾದಲ್ಲಿ ಮತ್ತೇ ಕಾಣಿಸಿಕೊಳ್ಳಲಿದ್ದಾರೆ , ನಾಯಕಿಯಾಗಿ ನಟಿಸಿದ್ದ ರಮ್ಯಾ ಸದ್ಯ ರಾಜಕೀಯಾದಲ್ಲಿ ಬಿಝಿಯಾಗಿದ್ದು, ಅವರ ಜಾಗಕ್ಕೆ ಹೊಸ ಮುಖವೊಂದನ್ನು ನಿರ್ದೇಶಕರು ನೋಡುತ್ತಿದ್ದಾರೆ.

ಈ ಸಿನಿಮಾದ ಎಲ್ಲ ಪೋಸ್ಟರ್ ಗಳು ಕ್ಯಾರಿಕೇಚರ್ ರೂಪದಲ್ಲಿಯೇ ಇರುತ್ತವೆ ಎಂದು ಪ್ರೀತಂ ಗುಬ್ಬಿ ಹೇಳಿದ್ದಾರೆ. ದುನಿಯಾ ವಿಜಯ್ ಹಾಗೂ ರಂಗಾಯಣ ರಘು ಇರುವ ಫಸ್ಟ್ ಲುಕ್ ನ್ನು ಅವರು ಬಿಡುಗಡೆಗೊಳಿಸಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com