ದಿ ವಿಲ್ಲನ್ ಚಿತ್ರಕ್ಕೆ ಸೆಡ್ಡು ಹೊಡೆಯುತ್ತಿದೆ ರಾಗಿಣಿಯ ಟೆರರಿಸ್ಟ್ ಚಿತ್ರ, ಯಾವ ಚಿತ್ರ ಗೆಲ್ಲುತ್ತೆ

ಬೆಂಗಳೂರು (ಅ. 04): ರಾಗಿಣಿ ನಟನೆಯ ಟೆರರಿಸ್ಟ್ ಹಾಗೂ ದಿ ವಿಲನ್ ಒಂದೇ ವಾರ ತೆರೆಗೆ ಬರುತ್ತಿದೆ. ಪಿ ಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಆಗಿದ್ದು, ಯುಎ ಸರ್ಟಿಫಿಕೇಟ್ ಕೊಡಲಾಗಿದೆ.

ಅ.18 ರಂದು ದಿ ವಿಲನ್ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅದೇ ದಿನ ಟೆರರಿಸ್ಟ್ ಚಿತ್ರವನ್ನೂ ಸಹ ಜಯಣ್ಣ ಕಂಬೈನ್ಸ್‌ನಲ್ಲಿ ತೆರೆಗೆ ಬರುತ್ತಿದ್ದಾರೆ ನಿರ್ದೇಶಕರು. ಅ.18 ಬಿಟ್ಟರೆ ಬೇರೆ ವಾರಗಳಲ್ಲಿ ಬರುವುದಕ್ಕೆ ಕಷ್ಟವಿದೆ. ಕನ್ನಡದ್ದೇ ಒಂದಿಷ್ಟು ಚಿತ್ರಗಳ ಜತೆಗೆ ಬೇರೆ ಭಾಷೆಯ ಸಿನಿಮಾಗಳೂ ಬರುತ್ತಿವೆ. ಹೀಗಾಗಿ ಅನಿವಾರ್ಯವಾಗಿ ದಿ ವಿಲನ್ ಎದುರು ಬರುತ್ತಿರುವುದಾಗಿ ನಿರ್ದೇಶಕರು ಹೇಳಿಕೊಳ್ಳುತ್ತಾರೆ.

ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಹೆಚ್ಚು ಸದ್ದು ಮಾಡಲಿದೆ ಎಂಬುದು ಈಗಿರುವ ಕುತೂಹಲ

Facebook Auto Publish Powered By : XYZScripts.com