ದಶಕದ ನಂತರ ‘ಗಜ’ ಟ್ರೆಂಡ್ : ಮತ್ತೆ ಸಾಬೀತಾಯ್ತು ಡಿ ಬಾಸ್ ಪವರ್

ಇಂದು ನಟ ದರ್ಶನ್ ಅಭಿನಯದ ಒಂದು ಸಿನಿಮಾ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಆ ಸಿನಿಮಾ ಇತ್ತೀಚಿಗಿನ ಹೊಸ ಸಿನಿಮಾ ಅಲ್ಲ. ಹತ್ತು ವರ್ಷದ ಹಿಂದಿನ ಸಿನಿಮಾ. ಹೌದು, ದರ್ಶನ್ ಅವರ ‘ಗಜ’ ಸಿನಿಮಾ ರಿಲೀಸ್ ಆಗಿ ಇಂದಿಗೆ 10 ವರ್ಷವಾಗಿದೆ. ಜೊತೆಗೆ ಟ್ವಿಟ್ಟರ್ ನಲ್ಲಿ ‘ಗಜ’ ಸಿನಿಮಾ ಇದೀಗ ಟ್ರೆಂಡ್ ಆಗಿದೆ.

ದರ್ಶನ್ ಅವರ ಕೆರಿಯರ್ ನಲ್ಲಿ ಬಂದಿರುವ ಸೂಪರ್ ಹಿಟ್ ಸಿನಿಮಾಗಳಲ್ಲಿ ‘ಗಜ’ ಕೂಡ ಒಂದು. ಪಕ್ಕಾ ಕಮರ್ಶಿಯಲ್ ಆಗಿದ್ದ ಈ ಸಿನಿಮಾ ಸ್ನೇಹ, ಪ್ರೀತಿ ಮತ್ತು ಫ್ಯಾಮಿಲಿಯ ಕಥೆ ಹೇಳಿತ್ತು. 2008ರ ಜನವರಿ 11ಕ್ಕೆ ತೆರೆಗೆ ಬಂದಿದ್ದ ಈ ಸಿನಿಮಾ ಈಗ ದಶಕದ ಸಂಭ್ರಮದಲ್ಲಿದೆ. ಬಾಕ್ಸ್ ಆಫೀಸ್ ಸುಲ್ತಾನ ಎಂಬ ಬಿರುದು ಹೊಂದಿರುವ ದರ್ಶನ್ ಈ ಚಿತ್ರದಲ್ಲಿ ಕೋಟಿ ಕೋಟಿ ಗಳಿಕೆ ಮಾಡಿದ್ದರು. ಇನ್ನು 10 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಕನ್ನಡದ ಆಲ್ ಟೈಂ ಹಿಟ್ ‘ಗಜ’ ಸಿನಿಮಾದ ಕೆಲ ಕುತೂಹಲಕಾರಿ ವಿಷಯಗಳು ಮುಂದಿದೆ ಓದಿ…

‘ಗಜ’ ಸಿನಿಮಾ ದರ್ಶನ್ ಸಿನಿ ಜರ್ನಿಯ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ 175 ದಿನ ಪ್ರದರ್ಶನ ಕಂಡಿದ್ದು, 2008ರಲ್ಲಿ ಬಂದ ದೊಡ್ಡ ಹಿಟ್ ಸಿನಿಮಾವಾಗಿದೆ.

‘ಗಜ’ ಚಿತ್ರದ ಮೂಲಕ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ ಎನ್ನುವುದನ್ನು ಸಾಬೀತು ಮಾಡಿದರು. ಈ ಚಿತ್ರದಲ್ಲಿ ಅವರು ಪಡೆದ ಸಂಭಾವನೆಯಿಂದ ಅತಿ ಹೆಚ್ಚು ಸಂಭಾವನೆ ಪಡೆದ ಕನ್ನಡದ ನಟರ ಲಿಸ್ಟ್ ನಲ್ಲಿ ನಂ 1 ಸ್ಥಾನಕ್ಕೆ ಏರಿದರು.

‘ಗಜ’ ಸಿನಿಮಾ ಬರುವ ಮುಂಚೆ ದರ್ಶನ್ ಅವರ ಕೆಲ ಸಿನಿಮಾಗಳು ಸೋತಿತ್ತು. ಆದರೆ ಈ ಸಿನಿಮಾ ಎಲ್ಲ ಬೇಸರವನ್ನು ಮರೆಸಿತ್ತು. ‘ಗಜ’ ಸಿನಿಮಾ ಆ ಸಮಯದ ದೊಡ್ಡ ಹಿಟ್ ಚಿತ್ರವಾಗಿ ದರ್ಶನ್ ಪಾಲಿಗೆ ಬ್ರೇಕ್ ನೀಡಿತು.

ಈ ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ಮಲೆಯಾಳಂ ಬೆಡಗಿ ನವ್ಯ ನಾಯರ್ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾವಾಗಿತ್ತು. ಈ ಚಿತ್ರದ ನಂತರ ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಜೊತೆಗೆ ನವ್ಯ ನಟಿಸಿದರು.

ಕೆ.ಮಾದೇಶ್ ‘ಗಜ’ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರ ತೆಲುಗಿನ ‘ಭದ್ರ’ ಸಿನಿಮಾದ ರಿಮೇಕ್ ಆಗಿತ್ತು. ವಿ.ಹರಿಕೃಷ್ಣ ಸಂಗೀತ ದೊಡ್ಡ ಮಟ್ಟದ ಹಿಟ್ ಆಗಿತ್ತು. ಸಿನಿಮಾದಲ್ಲಿ ತೇಜಸ್ವಿನಿ, ದೇವರಾಜ್, ಕೋಮಲ್ ಸೇರಿದಂತೆ ಅನೇಕರು ಅಭಿನಯಿಸಿದ್ದರು.

ಸದ್ಯ ‘ಗಜ’ ಸಿನಿಮಾ ಟ್ವಿಟ್ಟರ್ ನಲ್ಲಿ ಟ್ರೆಂಟ್ ಆಗಿದೆ. 10 ವರ್ಷ ಪೂರೈಸಿರುವ ಖುಷಿಯಲ್ಲಿ ಡಿ ಬಾಸ್ ಅಭಿಮಾನಿಗಳು ಚಿತ್ರದ ಫೋಟೋ, ಫೋಸ್ಟರ್ ಗಳನ್ನು ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Facebook Auto Publish Powered By : XYZScripts.com