ದರ್ಶನ ಅವರ 51 ನೇ ಚಿತ್ರದ ಹೆಸರು ಏನು ಗೊತ್ತಾ?

ಇತ್ತೀಚೆಗಷ್ಟೇ ದರ್ಶನ ಅವರ 51 ನೇ ಚಿತ್ರದ ಮುಹೂರ್ತ ನಡೆದಿತ್ತು. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಫೆಬ್ರವರಿ 19ರಿಂದ ಆರಂಭವಾಗಲಿದೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,”ಬಹದ್ದೂರ್‌’ ಚೇತನ್‌ ಸಂಭಾಷಣೆ,  ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್‌, ದೇವರಾಜ್‌, ಧನಂಜಯ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಫೆಬ್ರವರಿ 16 ದರ್ಶನ್‌ ಹುಟ್ಟುಹಬ್ಬ. ಅಭಿಮಾನಿಗಳ ಸಂಭ್ರಮ ಈಗಾಗಲೇ ಆರಂಭವಾಗಿದೆ. ಈ ನಡುವೆಯೇ ದರ್ಶನ್‌ ಅವರ 51ನೇ ಚಿತ್ರದ ಶೀರ್ಷಿಕೆ ಕುತೂಹಲ ಕೂಡಾ ಅಭಿಮಾನಿಗಳಲ್ಲಿದೆ. ತಮ್ಮ ನೆಚ್ಚಿನ ನಟನ ಚಿತ್ರದ ಟೈಟಲ್‌ ಏನಿರಬಹುದೆಂಬುದನ್ನು ತಿಳಿಯಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅದು “ಯಜಮಾನ’. ಹೌದು, ದರ್ಶನ್‌ ಅವರ 51ನೇ ಚಿತ್ರಕ್ಕೆ “ಯಜಮಾನ’ ಎಂದು ಟೈಟಲ್‌ ಇಡಲಾಗಿದೆ.

ಹಾಗಾಗಿ, ಮುಂದಿನ ದಿನಗಳಲ್ಲಿ ದರ್ಶನ್‌ ಅಭಿಮಾನಿಗಳು ಪ್ರೀತಿಯಿಂದ ಅವರನ್ನು ಯಜಮಾನ ಎಂದು ಕರೆಯಬಹುದು. ನಿಮಗೆ ಗೊತ್ತಿರುವಂತೆ “ಯಜಮಾನ’ ಶೀರ್ಷಿಕೆಯಡಿ ಈಗಾಗಲೇ ಚಿತ್ರ ಬಂದಿದೆ. ವಿಷ್ಣುವರ್ಧನ್‌ ಅವರು ನಟಿಸಿರುವ ಈ ಚಿತ್ರ ದೊಡ್ಡ ಯಶಸ್ಸು ಕಂಡಿದೆ. ಈಗ 18 ವರ್ಷಗಳ ನಂತರ ಮತ್ತೆ ಈ ಟೈಟಲ್‌ ರಿಪೀಟ್‌ ಆಗಿದೆ. ಸಹಜವಾಗಿಯೇ ಈಗ ಹಳೆಯ ಯಶಸ್ವಿ ಹಾಗೂ ಸ್ಟಾರ್‌ ನಟರ ಚಿತ್ರಗಳ ಶೀರ್ಷಿಕೆಗಳು ಬಳಕೆಯಾಗುತ್ತಿವೆ.

Facebook Auto Publish Powered By : XYZScripts.com