ದರ್ಶನ ಅವರ ಒಡೆಯರ್ ಚಿತ್ರ ಸೆಟ್ಟೇರಕ್ಕೂ ಮೊದಲೇ ವಿವಾದ.. ಏನದು ಇಲ್ಲಿ ಓದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ವಿವಾದದಲ್ಲಿ ಸಿಲುಕಿಕೊಂಡಿದ್ದು ತುಂಬಾ ಕಡಿಮೆ. ಆರಂಭದಿಂದಲೂ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇನ್ನೇನು ಥಿಯೇಟರ್ ಗೆ ಬರಬೇಕು ಎನ್ನುವಾಗ ಚಿತ್ರಗಳು ಸುದ್ದಿ ಮಾಡುತ್ತವೆ. ಆದರೆ ಈ ಬಾರಿ ದರ್ಶನ್ ಅಭಿನಯಿಸಬೇಕಿರುವ ಚಿತ್ರಕ್ಕೆ ಶುರುವಿನಲ್ಲೇ ಕಂಟಕ ಎದುರಾಗಿದೆ.

ಇನ್ನು ಶುರುವಾಗದ ಸಿನಿಮಾಗೆ ಕಂಟಕ ಶುರುವಾಗಲು ಕಾರಣವೇನು? ಒಡೆಯರ್ ಚಿತ್ರವನ್ನ ಜನರು ವಿರೋಧ ಮಾಡಲು ಕಾರಣವೇನು? ಅಷ್ಟಕ್ಕೂ ದರ್ಶನ್ ಚಿತ್ರದ ವಿರುದ್ದ ಪ್ರತಿಭಟಿಸಲು ನಿರ್ಧಾರ ಮಾಡಿದವರು ಯಾರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಬೇಕಿರುವ ಒಡೆಯರ್ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಒಡೆಯರ್ ಚಿತ್ರದ ಹೆಸರು ಬದಲಿಸದಿದ್ದರೆ ದರ್ಶನ್ ಮನೆ ಮುಂದೆ ಪ್ರತಿಭಟಿಸುವುದಾಗಿ ಕನ್ನಡ ಕ್ರಾಂತಿ ದಳದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ದರ್ಶನ್ ತೂಗುದೀಪ್ ನಾಯಕ ನಟನಾಗಿ ಅಭಿನಯಿಸಬೇಕಿರುವ ‘ಒಡೆಯರ್’ ಚಲನಚಿತ್ರದ ಹೆಸರನ್ನು ಕೂಡಲೇ ಬದಲಾಯಿಸಬೇಕು. ನಾಡು – ನುಡಿ ಸೇವೆಗಾಗಿ ಮೈಸೂರು ರಾಜವಂಶಸ್ಥರಾದ ಒಡೆಯರ್ ಕೊಡುಗೆ ಅಪಾರವಾಗಿದೆ. ಆದರೆ ಅವರ ಹೆಸರಿನಲ್ಲಿ ಕಮರ್ಷಿಯಲ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಖಂಡನೀಯ ವಿಚಾರ ಎನ್ನುವುದು ಕನ್ನಡ ಕ್ರಾಂತಿ ದಳದ ಅಭಿಪ್ರಾಯ.

ಮೈಸೂರಿನಲ್ಲಿ ಈ ವಿಚಾರವಾಗಿ ಕನ್ನಡ ಕ್ರಾಂತಿ ದಳದ ವತಿಯಿಂದ ಸುದ್ದಿಘೋಷ್ಠಿ ಮಾಡಲಾಗಿದೆ. ಚಿತ್ರಕ್ಕೆ ಒಡೆಯರ್ ಹೆಸರು ನೀಡಿ ವಾಣಿಜ್ಯ ಮಂಡಳಿಯು ತಪ್ಪು ಎಸಗಿದ್ದು, ಒಂದು ವಾರದೊಳಗೆ ಹೆಸರು ಬದಲಾಯಿಸಬೇಕು. ಇಲ್ಲವಾದಲ್ಲಿ ದರ್ಶನ್ ಮನೆಯ ಮುಂದೆಯೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Facebook Auto Publish Powered By : XYZScripts.com