ದರ್ಶನ್ ‘ರಿಯಲ್ ಹೀರೋ’, ‘ಚಿನ್ನದಂತ ವ್ಯಕ್ತಿ’ ಹೀಗೆಂದ ಸ್ಟಾರ್ ನಟ ಯಾರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ದೊಡ್ಡ ಹೀರೋ. ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ದರ್ಶನ್ ಹೀರೋ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಇವೆ.

ಇದನ್ನ ಅನೇಕರು ಒಪ್ಪಿಕೊಂಡಿದ್ದಾರೆ. ಕೆಲವರು ಒಪ್ಪಿಕೊಳ್ಳದವರು ಇದ್ದಾರೆ ಬಿಡಿ. ಅದರಲ್ಲೂ ದರ್ಶನ್ ಜೊತೆ ಸಿನಿಮಾ ಮಾಡಿದ ಮೇಲಂತೂ ಸಂಪೂರ್ಣವಾಗಿ ಅವರ ಮನಸ್ಸಿನಲ್ಲಿ ದರ್ಶನ್ ಉಳಿದು ಬಿಡುತ್ತಾರೆ. ಅವರ ಬಗ್ಗೆ ಇದ್ದ ಭಾವನೆಗಳು ಬೇರೆಯದ್ದೇ ರೂಪ ಪಡೆದುಕೊಳ್ಳುತ್ತೆ.

ಈಗ ಇಂತಹದ್ದೇ ಸಂದರ್ಭಕ್ಕೆ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ಸಾಕ್ಷಿಯಾಗಿದ್ದಾರೆ. ದರ್ಶನ್ ‘ರಿಯಲ್ ಹೀರೋ’, ‘ಚಿನ್ನದಂತ ವ್ಯಕ್ತಿ’ ಎಂದ ಸ್ಟಾರ್ ನಟ ಕಾಮೆಂಟ್ ಮಾಡಿದ್ದಾರೆ. ಯಾರದು?

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅರ್ಜುನ್ ಸರ್ಜಾ, ಡಿ-ಬಾಸ್ ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ”ದರ್ಶನ್ ಒಬ್ಬ ರಿಯಲ್ ಹೀರೋ, ಚಿನ್ನದಂತ ವ್ಯಕ್ತಿ” ಎಂದಿದ್ದಾರೆ. ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅಭಿನಯದ ಮೊದಲ ಕನ್ನಡ ಸಿನಿಮಾ ‘ಪ್ರೇಮ ಬರಹ’ದಲ್ಲಿ ಹಾಡೊಂದಕ್ಕೆ ದರ್ಶನ್ ಹೆಜ್ಜೆ ಹಾಕಿದ್ದರು. ಈ ಹಾಡು ಸೂಪರ್ ಹಿಟ್ ಆಗಿತ್ತು. ಈ ಬಗ್ಗೆ ಮಾತನಾಡಿದ ಅರ್ಜುನ್ ಸರ್ಜಾ ”ದರ್ಶನ್ ಗೆ ನಿಜಕ್ಕೂ ಥ್ಯಾಂಕ್ಸ್. ಮಜಾ ಟಾಕೀಸ್ ಮೂಲಕ ದರ್ಶನ್ ಗೆ ಧನ್ಯವಾದಗಳು ಹೇಳೋಕೆ ಇಷ್ಟ ಪಡ್ತಿನಿ” ಎಂದರು.

Facebook Auto Publish Powered By : XYZScripts.com