ದರ್ಶನ್ ಮುಂದೆ ನಡೆಯದ ಕಣ್ಸೆನ್ನೆಯ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಆಟ

ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಹುಡುಗಿಯದ್ದೇ ಅಬ್ಬರ. ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರ್ಯಾಮ್ ಎಲ್ಲೆಲ್ಲಿಯೂ ಈಕೆಯ ಕಣ್ಣಿನದ್ದೇ ಸದ್ದು. ನಾವ್ ಯಾರ್ ಬಗ್ಗೆ ಹೇಳ್ತಿದ್ದೀವಿ ಅಂತ ನಿಮಗೆ ಈಗಾಗಲೇ ಗೊತ್ತಿರಬಹುದು. ಪ್ರಿಯಾ ಪ್ರಕಾಶ್ ವಾರಿಯರ್.

ಒಂದೇ ದಿನದಲ್ಲಿ.. ಇಡೀ ಭಾರತದಲ್ಲಿ ಹೊಸ ಸಂಚಲನ ಹುಟ್ಟಿಸಿದಾಕೆ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣೋಟದಲ್ಲೇ ಕೋಟ್ಯಾಂತರ ಹುಡುಗರ ದಿಲ್ ಕದ್ದ ಈ ಚೋರಿ ಇಂದು ನ್ಯಾಷನಲ್ ಕ್ರಶ್ ಅಂತಲೇ ಜನಪ್ರಿಯ.

ಕಣ್ ಹೊಡೆದು ಎಲ್ಲರ ಕಣ್ಮನ ಸೆಳೆದ ಈ ಮಾಯಾಂಗನೆ ಅಭಿನಯದ ಚೊಚ್ಚಲ ಚಿತ್ರದ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಕೆ ಬಗ್ಗೆ ಯಾವುದೇ ವಿಡಿಯೋ ಬಂದರೂ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಆಗ್ತಿದೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿದ್ದಳು. ಆದ್ರೀಗ, ಪ್ರಿಯಾ ಪ್ರಕಾಶ್ ವಾರಿಯರ್ ದರ್ಶನ್ ಮುಂದೆ ಶರಾಣಗಿದ್ದಾರೆ.

No 1 ಸ್ಥಾನಕ್ಕೆ ಬಂದ ದರ್ಶನ್

ಕಳೆದ ಮೂರ್ನಾಲ್ಕು ದಿನಗಳಿಂದ ಯೂಟ್ಯೂಬ್ ನಲ್ಲಿ ಮೊದಲ ಸ್ಥಾನದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ದರ್ಶನ್ ಮುಂದೆ ಶರಣಾಗಿದ್ದಾರೆ. ದರ್ಶನ್ ಅಭಿನಯದ ಹೊಸ ಚಿತ್ರದ ಟೀಸರ್ ಈಗ ಮೊದಲ ಸ್ಥಾನದಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾ ‘ಯಜಮಾನ’ ಚಿತ್ರದ ಟೈಟಲ್ ಟೀಸರ್ ನಿನ್ನೆ ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಈ ಟೀಸರ್ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿದೆ.

Facebook Auto Publish Powered By : XYZScripts.com