ದರ್ಶನ್ ಬಳಿ ಕ್ಷಮೆ ಕೇಳಿದ ರಾಣ, ಯಾಕೆ ಗೊತ್ತಾ?.. ಇಲ್ಲಿ ಓದಿ

ತೆಲುಗಿನ ರಾಣಾ ದಗ್ಗುಬಾಟಿ ಅವರು ನಮ್ಮ ಕನ್ನಡದ ದರ್ಶನ್ ಬಗ್ಗೆ ಮಾತನಾಡಿ, ಕೊನೆಗೆ ಕ್ಷಮೆಯನ್ನು ಕೇಳಿದ್ದಾರೆ. ಆದರೆ ಯ್ಯಾಕೆ ಏನು ಅಂತ ಹೇಳ್ತಿವಿ.

ದರ್ಶನ್ ಅವರ 50 ನೇ ಚಿತ್ರ ಹಾಗೂ ಭಾರತದ ಬಹು ನಿರೀಕ್ಷಿತ ಕನ್ನಡದ ಚಿತ್ರ “ಕುರುಕ್ಷೇತ್ರ”. ಈಗ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಅತೀ ಶೀಘ್ರದಲ್ಲಿಯೇ ಥಿಯೇಟರ್ ಅಂಗಳಕ್ಕೆ ಕಾಲಿಡಲು ತಯಾರಿ ನಡೆಸುತ್ತಿದೆ. ಈ ಚಿತ್ರವು ರವಿಶಂಕರ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್ ಸೇರಿದಂತೆ ಬಹು ದೊಡ್ಡ ತಾರಾಬಳಗ ಹೊಂದಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿಯವರೂ ಅಭಿನಯಿಸಬೇಕಿತ್ತು. ಆದರೆ ಆ ಸಮಯದಲ್ಲಿ ರಾಣಾ ಅವರು ‘ನಾನೇ ರಾಜಾ ನಾನೇ ಮಂತ್ರಿ’ ಚಿತ್ರದಲ್ಲಿ ಬ್ಯೂಸಿ ಹಾಗೂ ಡೇಟ್ ಹೊಂದಾಣಿಕೆ ಆಗದಿದ್ದ ಕಾರಣ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸಲು ಆಗಲಿಲ್ಲ ಎಂದಿದ್ದಾರೆ. ಈ ಮೂಲಕ ಒಂದು ಅತ್ಯುತ್ತಮ ಚಿತ್ರವನ್ನು ಮಿಸ್ ಮಾಡಿಕೊಂಡೆ ಹೀಗಾಗಿ ನಾನು ದರ್ಶನ್ ಅವರ ಬಳಿ ಕ್ಷಮೆ ಕೋರುತ್ತೀನಿ ಎಂದಿದ್ದಾರೆ. ಸಾಧ್ಯವಾದರೆ ಮುಂದೊಂದು ದಿನ ಕನ್ನಡ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತೀನಿ ಎಂದು ಹೇಳುವ ಮೂಲಕ ಕನ್ನಡಿಗರ ಮನಸ್ಸನ್ನೂ ಗೆದ್ದಿದ್ದಾರೆ ರಾಣಾ.

Facebook Auto Publish Powered By : XYZScripts.com