ದರ್ಶನ್ ಬರ್ತಡೇ ಗೆ ಚಿತ್ರರಂಗದಿಂದ ವಿಶೇಷ ಉಡುಗೊರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಇನ್ನು ಆರು ದಿನಗಳಷ್ಟೇ ಬಾಕಿ ಇದೆ. ಸ್ಟಾರ್ ಗಳ ಬರ್ತಡೇ ಗಳು ಅಂದಾಗ ಅವರ ಸಿನಿಮಾಗಳ ಮಹೂರ್ತ ,ಆಡಿಯೋ ರಿಲೀಸ್ ಆಗುವುದು, ಟ್ರೇಲರ್ ಬಿಡುಗಡೆ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿಕೊಂಡಿರುತ್ತಾರೆ.

ಈಗಾಗಲೇ ಅಭಿಮಾನಿಗಳು ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡಲು ಸಕಲ ತಯಾರಿಯನ್ನ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಅಭಿಮಾನಿಗಳು ಬಂದು ಒಂದೇ ಕಡೇ ಸೇರಿ ಡಿ ಉತ್ಸವ ಮಾಡಲಿದ್ದಾರೆ.

ನಿನ್ನೆಯೇ ‘ಪ್ರೇಮ ಬರಹ’ ಸಿನಿಮಾ ವೀಕ್ಷಿಸಿದ ಅಂಬಿ – ದರ್ಶನ್ !

ಪತ್ನಿ ವಿಜಯಲಕ್ಷ್ಮೀ ಕೈ ಮೇಲೆ ದರ್ಶನ್ ಅವರ ಹೆಸರಿನ ಹಚ್ಚೆ ಹಾಕಿಸಿಕೊಂಡು ಈ ವರ್ಷದ ಹುಟ್ಟುಹಬ್ಬ ಮತ್ತಷ್ಟು ಸ್ಪೆಷಲ್ ಮಾಡುತ್ತಿದ್ದಾರೆ. ಇನ್ನು ಸಿನಿಮಾರಂಗದಲ್ಲಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಿ ಬಾಸ್ ಗೆ ವಿಶೇಷ ಉಡುಗೊರೆಯೂ ಸಿಗಲಿದೆ. ಹಾಗಾದ್ರೆ ಚಂದನವನದಿಂದ ಏನೆಲ್ಲಾ ವಿಶೇಷತೆಗಳು ಡಿ ಉತ್ಸವದಲ್ಲಿ ಇರಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬದ ಅಂಗವಾಗಿ ಕರಿಯಾ ಸಿನಿಮಾವನ್ನ ಮರು ಬಿಡುಗಡೆ ಮಾಡಲಾಗುತ್ತಿದೆ. ಇಕ್ಬಾಲ್ ಫಿಲ್ಮ್ಸ್ ಅವರು ರಾಜ್ಯಾದಂತ್ಯ ಸಿನಿಮಾವನ್ನ ರೀ ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಶೈಲಜಾ ನಾಗ್ ನಿರ್ಮಾಣದಲ್ಲಿ ಸೆಟ್ಟೇರಿರುವ ಹೊಸ ಚಿತ್ರದ ಟೈಟಲ್ ಕೂಡ ಹುಟ್ಟುಹಬ್ಬದಂದು ಅನಾವರಣವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ನಿರ್ಮಾಪಕಿ ಶೈಲಜಾ ನಾಗ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಈಗಾಗಲೇ ಇದಕ್ಕಾಗಿ ಒಳ್ಳೆ ಪ್ಲಾನ್ ಮಾಡಿದ್ದಾರಂತೆ.

ದರ್ಶನ್ ಅಭಿನಯದ 50 ನೇ ಸಿನಿಮಾದ ಟ್ರೇಲರ್ ದಚ್ಚು ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಟೀಸರ್ ನೋಡಿ ಖುಷಿ ಆಗಿರುವ ಅಭಿಮಾನಿಗಳು ಟ್ರೇಲರ್ ನೋಡಲು ಕಾತುರದಿಂದ ಕಾದಿದ್ದಾರೆ.

ಹುಟ್ಟುಹಬ್ಬ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ತಯಾರಿ ಜೋರಾಗಿದೆ. ಇದನ್ನ ತಿಳಿದ ದರ್ಶನ್ ಅಕ್ಕ ಪಕ್ಕದ ಮನೆಯವರಿಗೆ ಸಮಸ್ಯೆ ಆಗದಂತೆ ನಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳು ಕೂಡ ಅದೇ ರೀತಿಯಲ್ಲಿ ಶಿಸ್ತು ಕಾಪಾಡಲು ಮುಂದಾಗಿದ್ದಾರೆ.

Facebook Auto Publish Powered By : XYZScripts.com