ದರ್ಶನ್ ‘ತಾರಕ್’ ಚಿತ್ರದ ಹಾಡುಗಳು ಇಂದು ಬಿಡುಗಡೆ

ದರ್ಶನ್ ಅಭಿನಯದ ‘ತಾರಕ್’ ಚಿತ್ರದ ಹಾಡುಗಳು ಇಂದು (ಆಗಸ್ಟ್ 17)ಕ್ಕೆ ರಿಲೀಸ್ ಆಗಿಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಸಂಜೆ 7.30ಕ್ಕೆ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಸಿನಿಮಾದ ಹಾಡುಗಳ ಟೀಸರ್ ರಿಲೀಸ್ ಆಗಿದ್ದು, ಆಡಿಯೋ ಬಗ್ಗೆ ನಿರೀಕ್ಷೆಯನ್ನು ಹುಟ್ಟಿಸಿದೆ. ‘ಚಕ್ರವರ್ತಿ’ ಚಿತ್ರದ ನಂತರ ಅರ್ಜುನ್ ಜನ್ಯ ದರ್ಶನ್ ಅವರ ‘ತಾರಕ್’ ಚಿತ್ರದಲ್ಲಿಯೂ ತಮ್ಮ ಸಂಗೀತವನ್ನು ಮುಂದುವರೆಸಿದ್ದಾರೆ. ಸಿನಿಮಾದ ಹಾಡುಗಳ ಪೈಕಿ ಗಾಯಕ ಅರ್ಮನ್ ಮಲ್ಲಿಕ್ ಎರಡು ಹಾಡು ಮತ್ತು ಇಂದು ನಾಗರಾಜ್ ಒಂದು ಹಾಡನ್ನು ಹಾಡಿದ್ದಾರೆ.

ಮಿಲನ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ದರ್ಶನ್ ಇಲ್ಲಿ ರಗ್ಬಿ ಪ್ಲೇಯರ್ ಆಗಿ ಮಿಂಚಿದ್ದಾರೆ. ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ಚಿತ್ರದ ನಾಯಕಿಯರಾಗಿದ್ದಾರೆ.

Facebook Auto Publish Powered By : XYZScripts.com