ದರ್ಶನ್ ಜೊತೆ ಸಿನಿಮಾ ಮಾಡ್ತೀರಾ: ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರ ಏನು ಗೊತ್ತಾ?

ದರ್ಶನ್ ಹಾಗೂ ಸುದೀಪ್ ಅವರನ್ನು ತೆರೆ ಮೇಲೆ ಒಟ್ಟಿಗೆ ನೋಡ ಬೇಕು ಎನ್ನುವುದು ಇಬ್ಬರ ಅಭಿಮಾನಿಗಳ ಆಸೆ ಕೂಡ ಒಂದು, ಈ ನಡುವೆ ಸುದೀಪ್ ಹಾಗೂ ದರ್ಶನ್ ಒಂದೇ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ ಅದ್ರೆ ಆದೆಲ್ಲ ಕೂಡ ಅಂತೆ, ಕಂತೆಯದ್ದೆ ಆಗಿದೆ.

ಈ ನಡುವೆ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ಬಾಸ್ ಸ್ಟ್ರೇಟ್ ಆಗಿ ಕೇಳ್ತಾ ಇದ್ದೀನಿ, ದರ್ಶನ್ ಅವರನ್ನ ನಿಮ್ಮನ್ನ ಒಂದೇ ಮೂವಿಯಲ್ಲಿ ನೋಡೋಕೆ ತುಂಬಾ ಆಸೆ ಇದೆ ಇಸ್ ಇಟ್ ಪಾಸಿಬಲ್ ಎಂದು ಪ್ರಶ್ನೆ ಕೇಳಿದ್ದಾರೆ.

ಅದಕ್ಕೆ ಸುದೀಪ್ ನೀಡಿದ ಉತ್ತರ ನೋಡಿ : ನಾನು ಚಿಕ್ಕವನಾಗಿರಬೇಕಾದ್ರೆ ನನಗೆ ನಮ್ಮಮ್ಮ ಏನೂ ಇಲ್ಲ ಅಂತ ಹೇಳೇ ಇಲ್ಲ. ನಾನು ಏನ್ ಕೇಳಿದ್ರೂ ನಮ್ ತಾಯಿ ಕೊಡ್ಸೋರು. ಆಗ ನಮ್ಮ ತಾಯಿಗೆ , ಅಮ್ಮ ಸೂರ್ಯ, ಚಂದ್ರ ಯಾಕೆ ಒಟ್ಟಿಗೆ ಕಾಣಿಸಿಕೊಳ್ಳೊಲ್ಲ ಅಂತ ಕೇಳ್ದೆ. ಆವಾಗ ನಮ್ ತಾಯಿ ಹೇಳಿದ್ರು, ಏನ್ಮಾಡ್ಲಿ ಕಂದಾ, ಸೂರ್ಯ ಬಂದಾಗ ಬೆಳಕಾಗುತ್ತೆ, ಚಂದ್ರ ಬಂದಾಗ ಕತ್ತಲಾಗುತ್ತೆ. ಅದು ಅಲ್ಲೇ ಸರಿ, ಇದು ಇಲ್ಲೇ ಸರಿ ಅಂತ ಥ್ಯಾಂಕ್ಯೂ ಹೇಳಿ ಮಾತು ಮುಗಿಸಿದ್ರು.

Courtesy: Kannada News Now

Facebook Auto Publish Powered By : XYZScripts.com